ಮುಖ ಪುಟ > Cultural Studies, Culture, Dharma, Hindu, Hinduism, Religion > ಬ್ರಾಹ್ಮಣರು ಪುರೋಹಿತಶಾಹಿಗಳೆ..?

ಬ್ರಾಹ್ಮಣರು ಪುರೋಹಿತಶಾಹಿಗಳೆ..?

ವಾಣಿ ಪಾಲ್ವೆ ಎನ್.

ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ಬರುತ್ತಿರುವ ಚರ್ಚೆಗಳನ್ನು ಗಮನಿಸಿದರೆ, ಹೇಗೆ ಕನ್ನಡದ ‘ಬುದ್ಧಿಜೀವಿಗಳೂ’ ‘ಗಂಭೀರ ಚಿಂತಕರೂ’ ಎನಿಸಿಕೊಂಡಿರುವವರು ಸಮಕಾಲೀನ ಸಂದರ್ಭದಲ್ಲಿ ಪುನರಾವಲೋಕಿಸಲೇ ಬೇಕಾದ ಅತ್ಯಂತ ಪ್ರಮುಖ ವಿಚಾರಗಳನ್ನು ಚರ್ಚೆಗೆ ಎತ್ತಿಕೊಂಡು, ಅಂತಿಮವಾಗಿ ಒಬ್ಬರಿಗೊಬ್ಬರು ಪರಸ್ಪರ ಕೆಸರೆರಚಿಕೊಳ್ಳುವ ಪ್ರವೃತ್ತಿಯಲ್ಲಿ ತಮ್ಮ ಚರ್ಚೆಯನ್ನು ಕೊನೆಗೊಳಿಸುತ್ತಾರೆ ಎಂಬುದು ತಿಳಿಯುತ್ತದೆ. ಭಾರತದ ಸಂದರ್ಭದಲ್ಲಿ ಗಂಭೀರವಾಗಿ ಚರ್ಚಿಸಬೇಕಾದ ನಮ್ಮ ಸಂಸ್ಕೃತಿ, ಸಂಪ್ರದಾಯ, ‘ಹಿಂದೂ ಧರ್ಮ’, ‘ಜಾತಿವ್ಯವಸ್ಥೆ’, ‘ಪುರೋಹಿತಶಾಹಿ’ ಮುಂತಾದ ವಿಷಯಗಳನ್ನು ಚರ್ಚೆಗೆತ್ತಿಕೊಂಡಂತಹ ಹಿರಿಯ ಚಿಂತಕರು, ವ್ಯಕ್ತಿಯ ಹಿನ್ನೆಲೆಯನ್ನು ಮುಖ್ಯವಾಗಿಟ್ಟುಕೊಂಡು ‘ಕುಚೋದ್ಯೆ’, ‘ವ್ಯಂಗ್ಯ ಭಾಷೆ’ಯನ್ನು ಬಳಸುವ ಮೂಲಕ ಚರ್ಚೆಯ ಕೇಂದ್ರವನ್ನು ಅಂಚಿಗೆ ತಳ್ಳಿರುವ ಸಂಗತಿಯನ್ನು ಕಾಣುತ್ತೇವೆ. ಇದಕ್ಕೆ ನಿದರ್ಶನವಾಗಿ, ಪುರೋಹಿತಶಾಹಿ: ರಾಮಜೊಯಿಸ್ v/s ಸಿವಿಎಲ್ ಶಾಸ್ತ್ರಿ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಕ್ರಿಯೆಯಾಗಿ  ವಾಚಕರ ವಿಜಯದಲ್ಲಿ ಬಂದ ಡಾ. ಕೆ. ಎನ್. ಭಗವಾನ್ ಮತ್ತು ಡಾ. ಎಂ. ಚಿದಾನಂದ ಮೂರ್ತಿಯವರ ಪ್ರತಿಕ್ರಿಯೆಗಳು. ಹಾಗೆಯೇ ಚಂದ್ರಶೇಖರ ಪಾಟೀಲ್ರವರ ಮರು ಪ್ರತಿಕ್ರಿಯೆಗಳನ್ನೊಳಗೊಂಡ ಚಿಮೂ ಚಿಂತನೆ: ‘ಗಂಭೀರವೋ? ‘ಚಿಂತಾಜನಕ’ವೊ? ಎಂಬ ಲೇಖನವು ಇದಕ್ಕೆ ಮತ್ತೊಂದು ಸಾಕ್ಷಿ.  ಈ ಪ್ರಸ್ತುತ ಲೇಖನ ಬರೆಯುವುದರ ಉದ್ದೇಶ ಈ ಲೇಖನಗಳಲ್ಲಿ ಪ್ರಸ್ತಾಪಿಸಲಾಗಿರುವ ‘ಹಿಂದೂ ಧರ್ಮ’, ‘ಜಾತಿ ವ್ಯವಸ್ಥೆ’, ‘ಪುರೋಹಿತಶಾಹಿ’ಗಳ ಬಗೆಗಿನ ಕುರಿತಾದ ವಿಷಯಗಳನ್ನು ಚರ್ಚೆಯ ಕೇಂದ್ರಕ್ಕೆ ತರುವ ಚಿಕ್ಕಪ್ರಯತ್ನವಾಗಿದೆ. ಆ ಮೂಲಕ ಈ ಜಿಜ್ಞಾಸೆಗಳಿಗೆ ಸಮರ್ಪಕವಾದ ಉತ್ತರವನ್ನು ಬುದ್ಧಿಜೀವಿಗಳಿಂದ ಬಯಸಲು ಸಾಧ್ಯವಾಗಬಹುದು.

ಮೊದಲನೆಯದಾಗಿ, ಚಂದ್ರಶೇಖರ ಪಾಟೀಲರು ‘ಪುರೋಹಿತಶಾಹಿ: ರಾಮಜೊಯಿಸ್ v/s ಸಿವಿಎಲ್ ಶಾಸ್ತ್ರಿ’ ಎಂಬ ಲೇಖನದಲ್ಲಿ ಪುರೋಹಿತಶಾಹಿಯನ್ನು ನಾನು ವಿಡಂಬನೆ ಮಾಡಿದ್ದು ನಿಜ. ಆದರೆ, ‘ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳಲ್ಲೂ ಇಂಥ ಪುರೋಹಿತಶಾಹಿ ಇದೆ’ ಎಂಬ ನಿಲುವಿನಲ್ಲಿಯೇ ನಾನು ಮಾತು ಶುರು ಮಾಡಿದ್ದು, ಹಿಂದುಗಳಲ್ಲಿ ಬ್ರಾಹ್ಮಣರು, ವೀರಶೈವರಲ್ಲಿ ಜಂಗಮರು, ಕ್ರೈಸ್ತರಲ್ಲಿ ಪಾದ್ರಿಗಳು, ಮುಸ್ಲಿಮರಲ್ಲಿ ಮುಲ್ಲಾಗಳು- ಈ ಪುರೋಹಿತಶಾಹಿ ಕೆಟಗರಿಗೆ ಸೇರುತ್ತಾರೆ. ಜಗತ್ತಿನ ಚರಿತ್ರೆಯುದ್ದಕ್ಕೂ ಎಲ್ಲಾ ಸ್ಥಾಪಿತ ಅಥವಾ ಸಾಂಸ್ಥಿಕ (ಇನ್ಸ್ಟಿಟ್ಯೂಶನಲಾಯಿಜ್ಡ್) ಧರ್ಮಗಳ ಲಕ್ಷಣವಿದು. ಎಂದು ಅಭಿಪ್ರಾಯ ಪಡುತ್ತಾರೆ. ಈ ಹೇಳಿಕೆಗಳನ್ನು  ಗಮನಿಸಿದರೆ, ಲೇಖಕರು ‘ವೀರಶೈವ’ ಮತ್ತು ‘ಹಿಂದು ಧರ್ಮ’ವನ್ನು ಕ್ರೈಸ್ತ, ಮುಸ್ಲಿಂ ರಿಲಿಜನ್ನುಗಳಂತೆ ಒಂದು ಸಾಂಸ್ಥೀಕರಣಗೊಂಡಿರುವ ರಿಲಿಜನ್ ಎಂದು ಗ್ರಹಿಸಿಕೊಂಡಂತಿದೆ. ಈ ಬಗ್ಗೆ ಸಹಜವಾಗಿಯೇ ಕೆಲವೊಂದು ಪ್ರಶ್ನೆಗಳು ಏಳುತ್ತವೆ. ಅವುಗಳಲ್ಲಿ ಮುಖ್ಯವಾದ ಎರಡನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತೇನೆ; ಮೊದಲನೆಯದು, ವೀರಶೈವ ಮತ್ತು ಹಿಂದೂಧರ್ಮಗಳು ಕ್ರೈಸ್ತ, ಇಸ್ಲಾಂನಂತೆ ಅಸ್ತಿತ್ವದಲ್ಲಿರುವ ರಿಲಿಜನ್ಗಳೇ? ಎರಡನೆಯದು, ಬ್ರಾಹ್ಮಣರು ಪುರೋಹಿತಶಾಹಿಗಳೇ?

ಕ್ರಿಶ್ಚಿಯನ್ ಹಾಗೂ ಮುಸ್ಲಿಂ ರಿಲಿಜನ್ನುಗಳಂತೆ ‘ಹಿಂದು ಧರ್ಮ’ ಕೂಡ ಸಾಂಸ್ಥೀಕರಣಗೊಂಡಿರುವ ರಿಲಿಜನ್ನು ಎಂದು ಹೇಳುವುದಾದರೂ ಹೇಗೆ? ಕ್ರೈಸ್ತ, ಮುಸ್ಲಿಂಗಳನ್ನು ಸಾಂಸ್ಥಿಕರಣಗೊಂಡ ರಿಲಿಜನ್ನುಗಳೆಂದು ಸಮರ್ಥಿಸುವುದಕ್ಕೆ ಹಲವಾರು ಅಂಶಗಳಿವೆ. ನಿಜ ಹೇಳಬೇಕೆಂದರೆ ಅ ಆಂಶಗಳೇ ಅವುಗಳನ್ನು ರಿಲಿಜನ್ಗಳನ್ನಾಗಿ ಮಾಡಿರುವುದು ಕೂಡ. ಕ್ರಿಶ್ಚಿಯಾನಿಟಿಯಲ್ಲಿ ‘ಗಾಡ್’, ‘ಚರ್ಚ್’, ‘ಬೈಬಲ್’ ಇರುವಂತೆಯೇ ಮುಸ್ಲಿಮರಲ್ಲಿಯೂ ‘ಅಲ್ಲಾಹು’, ‘ಮಸೀದಿ’, ‘ಖುರಾನ್’ಗಳು ಇವೆ. ಈ ರಿಲಿಜನ್ನುಗಳಲ್ಲಿ ‘ಗಾಡ್’ ನಮ್ಮ ಪ್ರಪಂಚದಿಂದ ಹೊರಗಿದ್ದು, ನಮ್ಮ ಪ್ರತಿಯೊಂದು ಕ್ರಿಯೆಗಳು ಸಹಾ ಅವನ ಉದ್ದೇಶದ ಈಡೇರಿಕೆಯಾಗಿದೆ ಎಂದು ನಂಬಿರುತ್ತಾರೆ. ಬೈಬಲ್ ಮತ್ತು ಕುರಾನ್ಗಳು ಆ ಗಾಡ್ನ ಪ್ರಕಟಣೆಗಳು. ಅವುಗಳು ಆಯಾ ರಿಲಿಜನ್ನಿನ ಜನರ ಪ್ರತಿಯೊಂದು ಕ್ರಿಯೆಗಳನ್ನು ನಿರ್ದೆಶನ ಮಾಡುತ್ತವೆ. ಈ ಗಾಡ್ನ ಪ್ರಕಟಣೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರೀಸ್ಟ್ಗಳು ಮಾಡುತ್ತಾರೆ. ಈ ಯಾವ ಲಕ್ಷಣಗಳನ್ನೂ ಒಳಗೊಂಡಿರದ ‘ಹಿಂದು ಧರ್ಮ’ವನ್ನು ಇವುಗಳ ಗುಂಪಿಗೆ ಸೇರಿಸುವುದು ಸರಿಯೇ?

ಹಿಂದೂ ಧರ್ಮದಲ್ಲಿಯೂ ಕೂಡ ದೇವರುಗಳು ಇದ್ದಾರೆ, ವೇದಗಳು ಎಂಬ ಪವಿತ್ರ ಗ್ರಂಥಗಳು ಇವೆ, ದೇವಸ್ಥಾನಗಳಿವೆ ಹಾಗೆಯೇ ಪ್ರೀಸ್ಟ್ಗಳಾಗಿ ಬ್ರಾಹ್ಮಣರು ಕಾರ್ಯ ನಿರ್ವಹಿಸುತ್ತಿದ್ದಾರೆಂದು  ಯಾರೊಬ್ಬರಾದರೂ ಆಕ್ಷೇಪಣೆ ಎತ್ತಬಹುದು. ಆದರೆ ನಾವು ನಮ್ಮ ದೇವರು ಈ ಪ್ರಪಂಚದಿಂದ ಹೊರಗಿದ್ದು, ಅವನ ಉದ್ದೇಶಗಳಿಗೆ ಅನುಗುಣವಾಗಿ ನಡೆಯುತ್ತಿದ್ದೇವೆಂದು ನಂಬಿದ್ದೇವೆಯೇ? ಖಂಡಿತವಾಗಿಯೂ ಇಲ್ಲ. ನಾವು ಹುಲ್ಲು ಕಡ್ಡಿಗಳಲ್ಲೆಲ್ಲ ದೇವರುಗಳಿದ್ದಾವೆಂದು ನಂಬುತ್ತೇವೆ. ನಮ್ಮ ಎಲ್ಲಾ ಕ್ರಿಯೆಗಳು ವೇದಗಳು, ಮನುಧರ್ಮಶಾಸ್ತ್ರದಂತಹ ಪ್ರಾಚೀನ ಪಠ್ಯಗಳ ನಿರ್ದೇಶನದಂತೆ ನಡೆಯುತ್ತವೆಯೇ? ಇದಕ್ಕೂ ನಕಾರಾತ್ಮಕ ಉತ್ತರವೇ ಸರಿ. ನಾವು ನಮ್ಮ ಕ್ರಿಯೆ, ಆಚರಣೆಗಳನ್ನು ನಮ್ಮ ಹಿರಿಯರಿಂದ ನೋಡಿ ಕಲಿತು ಆಚರಿಸುತ್ತೇವೆ. ನಮ್ಮಲ್ಲಿ ಎಷ್ಟು ಜನರು ಯಾವ ಆಚರಣೆಗಳಿಗೆ ಸಂಬಂಧಿಸಿದಂತೆ ಪವಿತ್ರ ಗ್ರಂಥದ ಮೊರೆಹೋಗುತ್ತಾರೆ? ಅಸ್ತಿತ್ವದಲ್ಲೇ ಇಲ್ಲದ ಒಂದು ರಿಲಿಜನ್ನಿಗೆ ಪ್ರೀಸ್ಟ್ ವರ್ಗ ವಾಸ್ತವಿಕವಾಗಿ ಇರಲು ಹೇಗೆ ಸಾಧ್ಯ? ಹಾಗಾಗಿ ಭಾರತದಲ್ಲಿರುವ ಬ್ರಾಹ್ಮಣ ಪುರೋಹಿತರುಗಳು ಕ್ರಿಶ್ಚಿಯನ್ ಪ್ರೀಸ್ಟ್ ಹಾಗೂ ಇಸ್ಲಾಂನ ಮುಲ್ಲಾಗಳಂತೆ ಎನ್ನುವುದು ಅವಾಸ್ತವಿಕವಾದ ಮಾತಾಗುತ್ತದೆ.

ಎಲ್ಲಾ ಮತಗಳಲ್ಲಿ ಪುರೋಹಿತಶಾಹಿ ಪ್ರಧಾನವಾಗಿ ಇದೆ ಎಂದು ಚಂಪಾ ಹೇಳಿರುವುದು ಸರಿ. ಇತರ ಮತಗಳಲ್ಲಿರುವ ಪುರೋಹಿತಶಾಹಿಗೂ ಹಿಂದೂ ಮತದ ಪುರೋಹಿತ ವರ್ಗಕ್ಕೂ ಮೂಲಭೂತ ವ್ಯತ್ಯಾಸ ಇದೆ. ಬೇರೆ ಮತಗಳ ಅನುಯಾಯಿಗಳಲ್ಲಿ ಯಾರು ಬೇಕಾದರೂ ಪಾದ್ರಿ ಅಥವಾ ಮುಲ್ಲಾ ಆಗ ಬಹುದು. ಹಿಂದೂ ಮತದಲ್ಲಿ ನಿದರ್ಿಷ್ಟ ಜಾತಿಯವರನ್ನು ಬಿಟ್ಟರೆ ಉಳಿದವರು ಪೂಜಾರಿ ಆಗಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಅನ್ಯ ಮತಗಳಲ್ಲಿ ಸ್ವಲ್ಪಮಟ್ಟಿಗಾದರೂ ಪ್ರಜಾಪ್ರಭುತ್ವ ಮತ್ತು ಸಮಾನತೆ ಇದ್ದರೂ, ಹಿಂದೂ ಮತದಲ್ಲಿ ಅದರ ಲವಲೇಶವೂ ಇಲ್ಲ ವೆಂದು ಅಭಿಪ್ರಾಯಪಡುವ ಕೆ.ಎನ್. ಭಗವಾನ್, ಮೂಲಭೂತ ವ್ಯತ್ಯಾಸವನ್ನೇನಾದರೂ ಗುರುತಿಸುತ್ತಾರೆಂದುಕೊಂಡರೆ ಅವರು ಹಿಂದೂಧರ್ಮದಲ್ಲಿ ಸಮಾನತೆ, ಪ್ರಜಾಪ್ರಭುತ್ವವಿಲ್ಲವೆಂದು ವಿಷಾದ ವ್ಯಕ್ತಪಡಿಸುತ್ತ್ತಾರಷ್ಟೇ. ನಮ್ಮಲ್ಲಿರುವ ಎಲ್ಲಾ ಜನಜಾತಿಗಳೂ ಹಿಂದೂ ಎಂಬ ಒಂದೇ ರಿಲಿಜನ್ನಿಗೆ ಸೇರಿದ್ದು, ಆ ರಿಲಿಜನ್ನಿಗೆ ಸೇರಿದ ಈ ಎಲ್ಲಾ ಜಾತಿಗಳಿಗೂ ಬ್ರಾಹ್ಮಣರೇ ಪ್ರೀಸ್ಟ್ಗಳು ಎಂಬುದಾಗಿ ಭಾವಿಸಿಕೊಂಡಾಗ ಮಾತ್ರವೇ ಇಂಥ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯ. ಆದರೆ ವಾಸ್ತವ ಹೇಗಿದೆ?

ಸಾಮಾನ್ಯ ತಿಳುವಳಿಕೆಗೆ ಬರುವಂತೆ ಭಾರತದಲ್ಲಿ ಹಲವಾರು ಜಾತಿಗಳಿವೆ. ಅಂತಹ ಪ್ರತಿಯೊಂದು ಜಾತಿಯು ತನ್ನದೇ ಆದ ದೇವಸ್ಥಾನಗಳನ್ನು ಹೊಂದಿದೆ. ಹಾಗೆಯೇ ಅವರ ಜಾತಿಯಲ್ಲಿನ ಯಾರಾದರೊಬ್ಬನನ್ನು ಪೂಜಾರಿಯನ್ನಾಗಿ ನೇಮಿಸಿರುತ್ತಾರೆ. ಜೊತೆಗೆ ಬ್ರಾಹ್ಮಣ ಜಾತಿಯ ಪುರೋಹಿತರುಗಳು ಮಾತ್ರವಲ್ಲದೆ ಲಿಂಗಾಯಿತ ಜಾತಿಗಳಿಗೆ ಜಂಗಮ ಎಂದು ಕರೆಯಲ್ಪಡುವ ಪುರೋಹಿತರು, ವಿಶ್ವಕರ್ಮರಲ್ಲಿ ಬರುವ ಪುರೋಹಿತರು, ಮಂಟೇಸ್ವಾಮಿಯನ್ನು ಪೂಜೆಮಾಡುವ ಐನೊರು, ಮಾದಿಗ ಜನಾಂಗದವರಲ್ಲಿ ಆದಿ ಜಾಂಬವಮುನಿಗಳು, ಮತ್ತು ಕುರುಬರಲ್ಲಿ ತಮಡಿಗಳು ಅಥವಾ ಒಡೆಯರು ಎಂದು ಕರೆಯಲ್ಪಡುವ ಪುರೋಹಿತರು ಹೀಗೆ ಹಲವು ಜಾತಿಯ ಜನರು ಪುರೋಹಿತರಾಗಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರರ್ಥ ಈ ಪುರೋಹಿತರು ಅವರವರ ಜಾತಿಗೆ ಮಾತ್ರವೇ ಸೀಮಿತರಾಗಿಲ್ಲ. ಇಲ್ಲೆಲ್ಲ ಪೌರೋಹಿತ್ಯವನ್ನು ಒಂದು ಕಸುಬು ಎಂಬುದಾಗಿ ಮಾತ್ರವೇ ನೋಡಲಾಗುತ್ತದೆ.  ಇಂಥ ಪುರೋಹಿತರ ಸಹಾಯವನ್ನು ಇತರ ಜಾತಿಯವರೂ ತೆಗೆದುಕೊಳ್ಳುತ್ತಾರೆ. ಬ್ರಾಹ್ಮಣರು ಕೂಡಾ ಹಾಗೆಯೇ ಇತರ ಜಾತಿಗಳಿಗೆ ಪೌರೋಹಿತ್ಯವನ್ನು ಮಾಡುತ್ತಾರೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಲಿಂಗಾಯಿತ ಪ್ರಾಬಲ್ಯವಿರುವ ಜಾಗಗಳಲ್ಲಿ ಜಂಗಮರು ಇತರ ಜಾತಿಗಳಿಗೆ ಪೌರೋಹಿತ್ಯ ಮಾಡಿಸಿದಷ್ಟು ಸಂಖ್ಯೆಯಲ್ಲಿ ಬ್ರಾಹ್ಮಣರು ಮಾಡಿಸುತ್ತಿಲ್ಲ. ಹೀಗಿದ್ದರೂ ಬ್ರಾಹ್ಮಣರನ್ನು ಮಾತ್ರ ಪುರೋಹಿತಶಾಹಿಗಳು ಎಂದು ಗುರುತಿಸಲು   ಕಾರಣವೇನು? ಉಳಿದೆಲ್ಲ ಜಾತಿಗಳಿಗೆ ಬ್ರಾಹ್ಮಣ ಪುರೋಹಿತರಾಗಲು ಅವಕಾಶ ಇಲ್ಲ ಎಂಬ ಕಾರಣದಿಂದ ಸಮಾನತೆ, ಪ್ರಜಾಪ್ರಭುತ್ವವಿಲ್ಲ ಎನ್ನುವುದು ಭಾರತೀಯ ಸಂದರ್ಭದಲ್ಲಿ ಅಸಂಗತವಾದ ವಿಚಾರ. ಬಹುಶಃ ಇಂಥ ಮಾತುಗಳು ಬುದ್ಧಿಜೀವಿಗಳನ್ನು ಬಿಟ್ಟರೆ ಉಳಿದವರಿಗೆ ಅರ್ಥವಾಗಲಾರವು.

(ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಪ್ರತಿಕ್ರೀಯೆ, ಪತ್ರಿಕೆಯಲ್ಲಿ ಚರ್ಚೆಯನ್ನು ನಿಲ್ಲಿಸಿದ ಕಾರಣ ಇಲ್ಲಿ ಪ್ರಕಟಿಸುತಿದ್ದೇವೆ)

Advertisements
 1. Ashok
  ಜುಲೈ 2, 2010 ರಲ್ಲಿ 3:12 ಅಪರಾಹ್ನ

  Well,

  Are you saying that there is no “Brahmin purohitashai”in India?

  Regards
  Ashok

  Like

  • ಜುಲೈ 4, 2010 ರಲ್ಲಿ 11:01 ಫೂರ್ವಾಹ್ನ

   1. Yes Ashok, you are right, there are some restrictions to some people by some people in our society. The interesting thing is, restricted people always are not so called lower caste at the same time Brahmins always do not impose restriction. It differs region to region. For instance, Dakkaliga castes restricted by Madiga for everything including walking in their street in through out Karnataka. In some regions so called HaRijans restrict Brahmins to enter into their streets and also to fetch water from their wells. Certainly there are restrictions among many castes. But the problem is one can not generalize those restrictions in a single explanatory model within the caste system framework. As kavitha said in earlier post, we can find many counter instances against the dominant model of the caste system. So the problem is we are not in a position to explain these practices in an understandable manner. This shows there is a problem in explanatory model which we have, that is the theory of caste system.
   2. Let us see another problem of the caste system theory; Hierarchy is the fundamental feature of the caste system. That is to say Brahmins at the top and lower castes at the bottom. So many sociologists contested this point by showing that there is no consistent hierarchy in Indian society. For eg,. Declan Quigely and M.N. Srinivas in their work they tried to show how the notion of hierarchy differs from region to region. Even Brahmins are also situated in lower strata in north India, they are MaHa Brahmins. If one starts to study Indian Society with the back ground of caste theory then he faces lots of problems as I mentioned above.

   Like

 2. shankarappa
  ಜುಲೈ 2, 2010 ರಲ್ಲಿ 4:18 ಅಪರಾಹ್ನ

  Yes, there is no “Brahman Purohitashai” in India. Of course we may see the Brahman Purohitas like other castes’ purohitas, but can not see the rule of “Brahmans’ Priest Craft”.

  Friendly

  Shankarappa

  Like

 3. ಜುಲೈ 2, 2010 ರಲ್ಲಿ 4:24 ಅಪರಾಹ್ನ

  Dear Ashok,
  ya true. Author says that there are purohits in India not “purohitashahi”. And every caste has their own purohits for doing puja. Some castes are inviting brahmin, jangama etc for the rituals. But they are not “purohitashahi” because “shahi” refers administrative authority/rulers. Brahmins are not administrates/rulers anywhere. In other words, Brahmins are not priests like Christians and Muslims have in their own religion.

  best regards
  praveen

  Like

 4. Ashok
  ಜುಲೈ 3, 2010 ರಲ್ಲಿ 11:05 ಫೂರ್ವಾಹ್ನ

  Dear,

  But Brahmins discriminated us in the society. they never allowed lower caste hindus to enter the temple, to walk in the streets that they walked, to fetch and drink water form the well from which they drank water. Can you justify theses issue?

  Best
  Ashok

  Like

 5. ಜುಲೈ 3, 2010 ರಲ್ಲಿ 1:14 ಅಪರಾಹ್ನ

  Dear Ashok,

  I have some objections to your claims: they never allowed lower caste hindus to enter the temple, to walk in the streets that they walked, to fetch and drink water form the well from which they drank water
  .
  I will give counter instances to your claim.

  1. First counter example: prohibition to use well [Brahman]. I have not seen any restriction or prohibition to use well, here I am giving one of them example: In a village [Dottametikurke, near to Arsikere] Madiga castes have their own well, they are not using the public well. Yet when their well becomes dried out, they use the public well without any restrictions of upper caste people. Similarly when the public well dried out rest of castes of that village including Lingayat, Bhrahman, Kuruba. . .[let me use for a while them as upper castes] use the private well of Madiga community with the consent of Madiga caste. The interesting thing is, once use of the well from the upper castes, Madiga people purifies the well. Lower and upper both castes know the matter. How do we understand this kind of practice? Do we say that Madigas treat Brahman and Lingyats as impure castes and low? or they treat the upper castes as inferior? Instead of this kind of understanding why do not we try to understand the phenomenon: mutual adjustments or mutual understand rather labeling the prohibition to well. We have to figure out what kind of mechanism working out in this context.

  2. Second objection: the prohibition to a temple entry. I have visited to the several low castes: Holeya and Madiga community temples like Maramma, Matangamma, Choudamma. They have their own pujari as Vani has argued in her article. The point is Brahman, Lingayat castes have also prohibited to temple entry of lower castes. Low castes also do not allow upper castes to enter in their temple.

  3. Last objection is to ‘Restriction to use street where Brahman walk’ statement. Do you have any such instance to this claim? Or have you undergone any such experience? I did not get any example. Yet I have read in the colonial accounts. The colonial authors restlessly described in this way. In urban area as well as in the rural all castes use street without any restriction, however they have their own ‘Keri’. If this the case then, how do we say that lower castes have prohibited using of street without any instances.

  Now we have counter examples to your claims. When we have both sets examples, it indicates that we do not understand our society properly. Rather we are reproducing the colonial literatures. The main problem lies in the domain of social science/theories. Without verifying the social phenomenon/fact or theories we accept as though those are reality of Indian society. More or less all social science scholars have been reproducing the colonial accounts. Therefore still, we are using those slogans: “never allowed lower caste hindus to enter the temple, to walk in the streets that they walked, to fetch and drink water form the well from which they drank water”. Therefore, these kinds of accounts are not our observations rather we already borrowed from the Westerners. Therefore, let us stop reproducing such accounts that misleads us to understand our society, try to understand our society in a better way.

  -Kavitha

  Like

  • Ashok
   ಜುಲೈ 5, 2010 ರಲ್ಲಿ 10:52 ಫೂರ್ವಾಹ್ನ

   Ms Kavitha,

   About your counter argument :
   1) One case which is different (which you quoted) may be the exceptional case which can prove you correct logically. it may help you to logically derive at the conclusion that you haven’t seen any problem in not allowing lower castes to fetch water from the well. But look at the overall percentage of these instances 1:99? or may be more then that? Do you think this would be the case in entire India? There is little mire then logical derivations.

   2) I agree that there are Gods and Temples run by lower castes and Brahmans do not enter that temple by choice because those temples are managed by the lower caste people and If a Brahman want to enter it there won’t be any restrictions for him and more impotently Brahmans will perform pooja on the day of inaugurating that temple and its only after the lower caste man takes over that they won’t enter.

   3) About the Restriction of walk in the streets, yes i know someone very close to my family was beaten up just for walking in the Brahman settlement street.

   Whatever I am saying is bit of my experience and the reading together, I hope i am clear.

   By the way sorry for delayed reply as i was on holiday for last three days.

   Best
   Ashok

   Like

 6. ಜುಲೈ 5, 2010 ರಲ್ಲಿ 12:00 ಅಪರಾಹ್ನ

  1.Yes Ashok, you are right, there are some restrictions to some people by some people in our society. The interesting thing is, restricted people always are not so called lower caste at the same time Brahmins always do not impose restriction. It differs region to region. For instance, Dakkaliga castes restricted by Madiga for everything including walking in their street in through out Karnataka. In some regions so called HaRijans restrict Brahmins to enter into their streets and also to fetch water from their wells. Certainly there are restrictions among many castes. But the problem is one can not generalize those restrictions in a single explanatory model within the caste system framework. As kavitha said in earlier post, we can find many counter instances against the dominant model of the caste system. So the problem is we are not in a position to explain these practices in an understandable manner. This shows there is a problem in explanatory model which we have, that is the theory of caste system.

  2.Let us see another problem of the caste system theory; Hierarchy is the fundamental feature of the caste system. That is to say Brahmins at the top and lower castes at the bottom. So many sociologists contested this point by showing that there is no consistent hierarchy in Indian society. For eg,. Declan Quigely and M.N. Srinivas in their work they tried to show how the notion of hierarchy differs from region to region. Even Brahmins are also situated in lower strata in north India, they are MaHa Brahmins. If one starts to study Indian Society with the back ground of caste theory then he faces lots of problems as I mentioned above.

  Like

 7. Mahesha
  ಜುಲೈ 6, 2010 ರಲ್ಲಿ 10:15 ಫೂರ್ವಾಹ್ನ

  ತಾವು ತಮ್ಮ ಲೇಖನದಲ್ಲಿ ಪುರೋಹಿತಶಾಹಿ ಎಂದರೆ ಪುರೋಹಿತ ವೃತ್ತಿಯವರು ಮಾಡುವ ದಬ್ಬಾಳಿಕೆ ಎಂಬಂತೆ ಉಹಿಸಿದ್ದಿರಿ (Assumption). ಅದು ಸರಿಯೇ? ಇಂದಿನ ಜನ್ಮತ: ಬ್ರಾಹ್ಮಣರಲ್ಲಿ ಐದೋ ಆರೋ ಪರ್ಸೆಂಟ್ ಜನರು ಮಾತ್ರ ಪುರೋಹಿತ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ. ಉಳಿದವರು ಇತರ ದಂಧೆಗಳನ್ನು (ಕೆಟ್ಟ ಅರ್ಥವಲ್ಲ) ನಡೆಸುತ್ತಿದ್ದಾರೆ. ನನಗೆ ತಿಳಿದಿರುವ ಪ್ರಕಾರ ದಬಾಲಿಕೆ ನಡೆಸುವುದು ಇಂತಹ ಸಮಾಜದಲ್ಲಿ ಅಲ್ಪ ಸ್ವಲ್ಪ ಅಧಿಕಾರ, ಹಣ ಇತ್ಯಾದಿಗಳನ್ನು ಗಳಿಸಿದ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರೆ ವಿನಃ ಸಂಬಳದ ದುಡ್ಡಿನಲ್ಲಿ ಜೀವಿಸುವ ಪೂಜಾರಿಯಲ್ಲ. ಹಾಗಂತ ಎಲ್ಲ ಪೂಜಾರಿಗಳು ಹೀಗೆಯೇ ಎಂದು ಹೇಳಲು ಬರುವುದಿಲ್ಲ, ಇತರ ವೃತ್ತಿಗಳಲ್ಲಿರುವವರು ಎಲ್ಲರೂ ದಬ್ಬಾಳಿಕೆ ನಡೆಸುವವರೇ ಎಂದು ಹೇಳಲು ಬಾರದು. ನೀವು ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಅಂತ ಅಷ್ಟೇ ಹೇಳಿದೆ.

  ಇನ್ನು ನಿಮ್ಮ ಸಂಶೋಧನೆ ಬಗ್ಗೆ ಹೇಳಬೇಕೆಂದರೆ ಕೊನೆಗೂ ನಮ್ಮ ಸಮಾಜದ ಬಗ್ಗೆ ಅಧ್ಯಯನ ಮಾಡುವ ಯುವಕ ಯುವತಿಯರು ಇದ್ದಾರಲ್ಲಾ ಎಂಬ ವಿಷಯ ತಿಳಿದು ಸಂತೋಷವಾಯಿತು. ನಿಮಗೆ ಶುಭವಾಗಲಿ ಹಾಗು ಇನ್ನೂ ಹೆಚ್ಚು ಹೆಚ್ಚು ಸಂಶೋಧನೆಗಳು ಈ ಬಗ್ಗೆ ನಡೆಯಲಿ.

  ನಿಮ್ಮ ಹಿಂದುತ್ವದ ತಿಳುವಳಿಕೆಯ ಬಗ್ಗೆ ನನಗೆ ಸ್ವಲ್ಪ ತಕರಾರಿದೆ. ನಾನೂ ಹಿಂದುತ್ವದ ಹಿನ್ನೆಲೆಯಿಂದ ಬಂದವನೇ, ನನಗೂ ಅದರ ಬಗ್ಗೆ ನನ್ನದೇ ಆದ ಸ್ವತಂತ್ರ ಕಾಮೆಂಟುಗಳು/ತಕರಾರಿವೆ. ಆದರೆ ಹಿಂದುತ್ವ ನೀವು ತಿಳಿದುಕೊಂದಷ್ಟು hollow ಆಗಿಲ್ಲ. ನಿಮ್ಮ ಹಿಂದುತ್ವದ ತಿಳುವಳಿಕೆ ಕೇವಲ ಪತ್ರಿಕೆಯಲ್ಲಿ ಬಂದ ವರದಿಗಳನ್ನು ಆಧರಿಸಿದೆ ಅಂತ ನನ್ನ ಮೇಲುನೋಟದ ಅನುಭವ. ತಪ್ಪಾದರೆ ಕ್ಷಮೆಯಿರಲಿ. ತಾವು ಪತ್ರಿಕೆ ವರದಿಗಳನ್ನು ಆಧರಿಸಿ ಹಿಂದುತ್ವದ ಮುತ್ಸದ್ದಿಯೋಬ್ಬರನ್ನು (ಯಾವುದೋ ಬಿಸಿರಕ್ತದ ಯುವಕರನ್ನಲ್ಲ) ಭೇಟಿಮಾಡಿ ಇದರ ಬಗ್ಗೆ ವಿಚಾರಿಸಿ. ಆಗ ನಿಮಗೆ ಹಿಂದುತ್ವದ ಬಗ್ಗೆ ಇನ್ನು ಹೆಚ್ಚು ವಿಷಯಗಳು ತಿಳಿಯಬಹುದು.

  Like

  • Mahesha
   ಜುಲೈ 6, 2010 ರಲ್ಲಿ 10:17 ಫೂರ್ವಾಹ್ನ

   Please read it as “ತಾವು ಪತ್ರಿಕೆ ವರದಿಗಳನ್ನು ಆಧರಿಸುವುದರ ಬದಲಾಗಿ ಹಿಂದುತ್ವದ ಮುತ್ಸದ್ದಿಯೋಬ್ಬರನ್ನು”

   Like

 8. Nagashilpa
  ಜುಲೈ 6, 2010 ರಲ್ಲಿ 4:04 ಅಪರಾಹ್ನ

  ಮಹೇಶ್.,
  ನೀವು ಹೇಳುವಂತೆ ಈ ಲೇಖನವು ಪುರೋಹಿತಶಾಹಿ ಎಂದರೆ ಪುರೋಹಿತ ವೃತ್ತಿಯವರು ಮಾಡುವ ದಬ್ಬಾಳಿಕೆ ಎಂಬ ಊಹೆಯನ್ನು ಮಾಡಿಕೊಂಡು ಬರೆದಂತಹದ್ದಲ್ಲ.
  ಈ ಲೇಖನವು ಬುದ್ದಿಜೀವಿಗಳು ಬಳಸುತ್ತಿರುವ ಪುರೋಹಿತಶಾಹಿ ಎಂಬ ಪರಿಕಲ್ಪನೆಯು ವಾಸ್ತವದಲ್ಲಿ ಹೇಗೆ ಭಿನ್ನವಾಗಿದೆ ಎಂಬುದನ್ನು ತೋರಿಸುತ್ತದೆ… ಬುದ್ಧಿಜೀವಿಗಳು ಪುರೋಹಿತಶಾಹಿಯನ್ನು ಒಂದು ಗುಂಪಿಗೆ ಆರೋಪಿಸುತ್ತಿದ್ದಾರೆ. ಆದರೆ ಈ ಲೇಖನವು ಪುರೋಹಿತಶಾಹಿ ಎಂಬುದು ಒಂದು ಸೀಮಿತ ವರ್ಗಕ್ಕೆ ಸಂಬಂಧಪಟ್ಟಿರುವಂತಹದ್ದಲ್ಲ ಬದಲಾಗಿ ಪ್ರತಿಯೊಂದು ಜಾತಿಯಲ್ಲೂ ಪುರೋಹಿತರಿರುತ್ತಾರೆ. ಅಲ್ಲದೆ, ಬುದ್ಧಿಜೀವಿಗಳು ಗುರುತಿಸುತ್ತಿರುವಂತಹ ಪುರೋಹಿತಶಾಹಿ ಎಂಬ ವರ್ಗವು ಅಸ್ತಿತ್ವದಲ್ಲಿಲ್ಲವೆಂಬುದನ್ನು ಸ್ಪಷ್ಟಪಡಿಸಿದೆ.

  ನಾಗಶಿಲ್ಪ

  Like

 9. suresha.R
  ಜುಲೈ 21, 2010 ರಲ್ಲಿ 3:47 ಅಪರಾಹ್ನ

  hi its well but use kannada words

  Like

 10. suresha.R
  ಜುಲೈ 21, 2010 ರಲ್ಲಿ 4:14 ಅಪರಾಹ್ನ

  hi this is good but u must use kannada words in ur article

  Like

 11. ಜುಲೈ 21, 2010 ರಲ್ಲಿ 5:17 ಅಪರಾಹ್ನ

  ಮಿತ್ರ ಸುರೇಶ ಆರ್,

  ನಾವೆಲ್ಲಿ ಕನ್ನಡ ಉಪಯೋಗಿಸಬೇಕೆಂದು ತಿಳಿಸಿದರೆ ಚೆನ್ನಾಗಿರುತ್ತದೆ

  ವಂದನೆಗಳೊಂದಿಗೆ
  ಸಿ.ಎಸ್.ಎಲ್.ಸಿ ತಂಡ

  Like

 12. ಏಪ್ರಿಲ್ 23, 2017 ರಲ್ಲಿ 5:25 ಅಪರಾಹ್ನ

  It’s a real plreusae to find someone who can think like that

  Like

 13. ಮೇ 17, 2017 ರಲ್ಲಿ 8:45 ಅಪರಾಹ್ನ

  Hilarious – did you know you mimic the look of the celebrity? Made me laugh out loud. I want a rogue’s gallery with celebs like that too! I’m loving the new blog, Liz, it’s fab!

  Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: