ಮುಖ ಪುಟ > Cultural Studies, Culture, Dharma, Hindu, Hinduism, Religion > ಗೋಹತ್ಯೆ ನಿಷೇಧದ ಸುತ್ತ…

ಗೋಹತ್ಯೆ ನಿಷೇಧದ ಸುತ್ತ…

ಕವಿತಾ ಪಿ.ಎನ್ ಮತ್ತು ಸಂದೀಪ

(Around the Ban on Cow Slaughter)

ಇತ್ತೀಚಿಗೆ ಗೋಹತ್ಯೆ ಹಾಗೂ ಗೋಹತ್ಯೆ ನಿಷೇಧಕಾಯಿದೆ/ಶಾಸನಬದ್ಧಗೊಳಿಸುವ ಕುರಿತಂತೆ ಬಿಡುವಿಲ್ಲದೇ ಚರ್ಚೆಗಳು ನಡೆಯುತ್ತಿರುವುದನ್ನು ನಾವೆಲ್ಲ ಓದುತ್ತಿದ್ದೇವೆ. ಹಳೆಯ ಒಂದು ಹಿಂದೂ ಪತ್ರಿಕೆಯಲ್ಲಿ ಬಂದ ‘Cow slaughter ban is a tool to oppress Dalits’ ಸಿಬ್ಬಂದಿ ಮಾಡಿದ್ದ ವರದಿಯಲ್ಲಿ, ಆರ್.ಎಸ್.ಎಸ್. ಮತ್ತು ಅದರ ವಿರೋಧಿ ಪಾಳೇಯದ ಟೀಕಾ ಪ್ರಹಾರಗಳು ಕಂಡುಬಂದವು.

ಆರ್.ಎಸ್.ಎಸ್.ಅನ್ನು ಟೀಕಿಸುವರು ಹೇಳುವುದೆನೆಂದರೆ, ಭಾರತೀಯ ಸ್ಥಳೀಯ ಸಂಸ್ಕೃತಿಗಳಿಗೆ ಹಿಂದೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯು ವಿದೇಶದಿಂದ ಆಮದು ಮಾಡಿಕೊಂಡ ಸರಕು, ಆದರೆ ಆರ್.ಎಸ್,ಎಸ್.ನವರು ಬೇರೆ ಬೇರೆಯ ರೀತಿಯ ಆಹಾರ ಪದ್ದತಿಗಳನ್ನು ಹೊಂದಿರುವ ಸಂಸ್ಕೃತಿಗಳನ್ನು ರಾಷ್ಟ್ರೀಯತೆಯ ವಿರೋಧಿಗಳು ಎಂದು ಗುರುತಿಸುವ ಮೂಲಕ, ಆಂತರೀಕವಾಗಿ ಶತ್ರುಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ಪ್ರಕಾಶ ಅವರು ನೀಡಿದ್ದಾರೆ.

ಇನ್ನೂ ಆರ್.ಎಸ್.ಎಸ್. ವಿರೋಧಿಸುವವರ ನಿಲುವೆಂದರೆ, ಐತಿಹಾಸಿಕ, ಅಥವಾ ಪೌರಾಣಿಕ (ಪವಿತ್ರಗ್ರಂಥ ಎನಿಸಿರುವ) ಗ್ರಂಥಗಳೆ ಮಾಂಸಾಹಾರ ಮಾಡಲು ಅನುಮೋದನೆ ನೀಡಿರಬೇಕಾದರೆ ಸೇವಿಸುವುದರಲ್ಲಿ ತಪ್ಪೆನಿದೆ ಎಂಬುದು.

ಮೇಲ್ನೊಟಕ್ಕೆ ವಿರೋಧಿ ಬಣಗಳು ಆರ್.ಎಸ್.ಎಸ್.ಗಿಂತ ಭಿನ್ನ ನೆಲೆಯಲ್ಲಿ ಮಾತನಾಡುತ್ತಿದ್ದಾರೆ ಎನಿಸಿದರೂ ಸಹ ಇವರು ಕೂಡ ಆರ್.ಎಸ್.ಎಸ್ ಹೊಂದಿರುವ ಗ್ರಹಿಕೆಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವರ ನಿಲುವುಗಳನ್ನು ಹೇಗೆ ಒಂದೆ ಚೌಕಟ್ಟಿನಡಿಯಲ್ಲಿ ಸಿದ್ಧಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ಮೊದಲಿಗೆ ಆರ್.ಎಸ್.ಎಸ್.ನ ನಿಲುವಿನ ಕುರಿತು ಚರ್ಚಿಸುವುದಾದರೆ, ಏಕೆ ಬೇರೆ ಬೇರೆಯ ಆಹಾರ ಪದ್ದತಿಗಳು ಹೊಂದಿದ ಸಂಸ್ಕೃತಿಗಳನ್ನು ಆರ್.ಎಸ್.ಎಸ್ ಹಿಂದೂ ರಾಷ್ಟ್ರೀಯತೆಯ ವಿರೋಧಿಗಳು ಎಂದು ಪರಿಗಣಿಸಬೇಕು? ಬೇರೆ ಬೇರೆಯ ಸಂಸ್ಕೃತಿಗಳು ಬೇರೆ ಬೇರೆ ರೀತಿಯ ಜೀವನ ಶೈಲಿ ಹೊಂದಿದ್ದರೆ ಅವರು ರಾಷ್ಟ್ರೀಯತೆಯ ವಿರೋಧಿಯಾಗಲು ಹೇಗಾಗುತ್ತಾರೆ? ಅವರ ಪ್ರಕಾರ ವೈವಿಧ್ಯತೆಯು ಏಕತೆಗೆ ಧಕ್ಕೆ ತರುತ್ತಿದೆ ಎಂದರೆ ಅವರ ಏಕತೆಯ ಕಲ್ಪನೆ ಹಾಗೂ ರೂಪಗೊಂಡ ಹಿನ್ನೆಲೆ ಬೇರೆಯಾಗಿಯೇ ಇರಬೇಕು: ಆರ್.ಎಸ್.ಎಸ್.ನ ಹಿಂದೂ ರಾಷ್ಟ್ರ, ಸಂಸ್ಕೃತಿ, ಜೀವನ ಪದ್ದತಿ ಎಂದರೆ ಹೀಗೆ ಇರಬೇಕು ಎಂದು ಭಾವಿಸಿಕೊಂಡಂತಿದೆ. ಏಕೆಂದರೆ ಆರ್.ಎಸ್.ಎಸ್.ನ ಮುಖ್ಯ ಗುರಿ ಅಖಂಡ ಹಿಂದೂ ಸಾಮ್ರಾಜ್ಯ ಸ್ಥಾಪನೆ(ಒಂದೇ ಮೌಲ್ಯ, ರಾಷ್ಟ್ರೀಯತೆಯ ಕಲ್ಪನೆ, ಭಾಷೆ, ಧರ್ಮ). ಆದರೆ ಭಾರತದಲ್ಲಿನ ವೈವಿಧ್ಯತೆಯು ಹಿಂದೂ ರಾಷ್ಟ್ರೀಯತೆಯ ಅಖಂಡತೆಗೆ ಎಂದಿಗೂ ಮುಳುವೆ ಎಂದವರ ಅನಿಸಿಕೆ. ಆದ್ದರಿಂದ ವೈವಿಧ್ಯತೆಯು ಏಕೆ ರಾಷ್ಟ್ರೀಯತೆಗೆ ಧಕ್ಕೆ ತರಬೇಕು ಎಂಬಂಥ ಪ್ರಶ್ನೆಯು ಸಾಮಾನ್ಯ ಜನರಿಗೆ ಅಸಂಬದ್ಧವಾಗಿಯೇ ತೋರಿದರೂ, ಸೆಮೆಟಿಕ್ ರಿಲಿಜನ್( ಒಬ್ಬನೆ ಸತ್ಯವಾದ ದೇವರು, ಒಂದೇ ಪವಿತ್ರ ಗ್ರಂಥ, ಒಂದೇ ಪವಿತ್ರ ಸ್ಥಳ ಇರಲೇಬೇಕು) ಮಾದರಿಯಲ್ಲಿ ಹಿಂದೂ ಸಾಮ್ರಾಜ್ಯ/ರಿಲಿಜನ್ ಸ್ಥಾಪಿಸ ಹೊರಟ ಆರ್.ಎಸ್.ಎಸ್ ನವರಿಗೆ ಇವೆಲ್ಲ ಸುಸಂಬದ್ಧವಾಗಿಯೇ ತೋರುತ್ತವೆ. ಏಕೆಂದರೆ ಅವರ ಪ್ರಕಾರ ಹಿಂದೂಗಳು ಸತ್ಯವಾದ ಒಂದೇ ಪವಿತ್ರ ಗ್ರಂಥ, ಪೂಜಾ ಸ್ಥಳ, ಡಾಕ್ಟ್ರಿನ್, ಮೌಲ್ಯ, ಇತ್ಯಾದಿ ಹೊಂದಿದ್ದಾರೆ ಎಂದು. ಹಾಗಾಗಿಯೇ ಅವರಿಗೆ ವೈವಿಧ್ಯಮಯ ಆಹಾರ ಪದ್ದತಿಗಳು ಕೂಡ ಹಿಂದೂ ರಿಲಿಜನ್/ಸಾಮ್ರಾಜ್ಯಕ್ಕೆ ಮಾರಕವಾಗುತ್ತವೆ. ಆದರೆ ಅವರು ಸ್ಥಾಪಿಸಲು ಇಚ್ಛಿಸುತ್ತಿರುವ ಹಿಂದೂ ಧರ್ಮ( ರಿಲಿಜನ್ ಮಾದರಿಯ) ನಾವು ಹೊಂದಿದ್ದೇವೆಯೇ ಎಂಬುದು ಆಸಕ್ತಿದಾಯಕ ಪ್ರಶ್ನೆಯೆ ಸರಿ.

ಎರಡನೇಯದಾಗಿ ಇವರನ್ನು ದೂರುವ ಆರ್.ಎಸ್.ಎಸ್. ವಿರೋಧಿ ಪಾಳಯ ವಾದಿಸುವಂತೆ, ಏಕೆ ಮಾಂಸಾಹಾರ ಮಾಡಲು ಐತಿಹಾಸಿಕ, ಅಥವಾ ಪೌರಾಣಿಕ (ಪವಿತ್ರಗ್ರಂಥ ಎನಿಸಿರುವ) ಗ್ರಂಥಗಳ ಅನುಮೋದನೆ ಹುಡುಕುತ್ತಿವೆ ಅಥವಾ ಅದರ ಪುರಾವೆಯನ್ನು ಸೂಚಿಸುತ್ತಿವೆ ಎಂಬುದು ಒಂದು ಒಗಟೆ ಸರಿ. ಅವರೆ ಉಲ್ಲೇಖಿಸುವಂತೆ, “Valmiki Ramayana has sanctioned beef eating: historian”. “Prof. Narasimaiah pointed out several references that sanctioned eating beef”. ಮೇಲ್ನೊಟಕ್ಕೆ ಇದು ಕೇವಲ ಸಹಜವಾಗಿ ಕಂಡರು ಆಸಕ್ತಿದಾಯಕವಾಗಿದೆ. ಏಕೆಂದರೆ, ನಮ್ಮ ನಿತ್ಯ ಜೀವನದ ಆಗು ಹೋಗುಗಳನ್ನು ನಾವು ಗ್ರಂಥಗಳ ನಿರ್ದೇಶನದಿಂದಲೇ ರೂಪಿಸಿಕೊಳ್ಳುತ್ತೆವೆಯೇ? ಅಥವಾ ಗ್ರಂಥಗಳು ನಮ್ಮ ಸಮಾಜವನ್ನು ಹಾಗೂ ನಮ್ಮ ಜೀವನವನ್ನು ರೂಪಿಸುತ್ತಿವೆಯೇ? ಎಲ್ಲೋ ಕೆಲವು ಜನರು ಕೆಲವು ಗ್ರಂಥಗಳನ್ನು ಉಲ್ಲೇಖಿಸಿದರು ಉದಾ: ಭಗವದ್ಗೀತೆ, ರಾಮಾಯಾಣ, ಮಹಾಭಾರತ, ಇತ್ಯಾದಿ., ಅವುಗಳ ನಿರ್ದೇಶನನದಿಂದಲೇ ಜೀವನ ನಡೆಸುತ್ತಾರೆಯೇ? ಅಥವಾ ನಾವು ಯಾವುದೇ ಕೆಲಸ ಮಾಡಬೇಕಾದರು ಅವುಗಳನ್ನು ಓದಿಕೊಂಡು ಕೆಲಸ ಮಾಡುತ್ತೇವೆಯೇ? ವಾಸ್ತವ ಹೀಗಿರಬೇಕಾದರೆ, ಗೋಹತ್ಯೆ ಶಾಸನಬದ್ಧವಾಗಬೇಕಾದರೆ ಏಕೆ ನಮಗೆ ಗ್ರಂಥಗಳ ಅನುಮೋದನೆ ಬೇಕು? ಗ್ರಂಥಗಳ ಅನುಮೋದನೆ ಪಡೆಯುವುದು ನಮ್ಮ ನೈಜ ಜೀವನದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆಯೇ? ಏಕೆ ಮಾಂಸಾಹಾರ ಮಾಡಲು ಇವರು ಪವಿತ್ರ ಗ್ರಂಥಗಳ ಅನುಮೋದನೆ ಮೊರೆಹೋಗಿದ್ದಾರೆ?

ಇದರ ಜೊತೆಗೆ ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು. ಭಾರತದಲ್ಲಿ ಒಂದೇ ಗ್ರಂಥ ಇಲ್ಲ ಎಂಬುದು ಆರ್.ಎಸ್.ಎಸ್ ವಿರೋದಿಗಳ ಉಲ್ಲೇಖಗಳನ್ನು ನೋಡಿದರೆ ತಿಳಿಯುತ್ತದೆ, ಅವರೆ ರಾಮಾಯಾಣ, ಕಾಮಸೂತ್ರ, ಇನ್ನೂ ಅನೇಕ ಗ್ರಂಥಗಳಿವೆ ಎಂದು ತಿಳಿಸುತ್ತಾರೆ . ಹೀಗೆ ನೂರಾರು ಜನರು ನೂರಾರು ರೀತಿಯ ಗ್ರಂಥಗಳನ್ನು ಉಲ್ಲೇಖಿಸುತ್ತಾರಾದರೆ, ಅದರರ್ಥ ಯಾವುದೇ ಒಂದು ನಿರ್ದಿಷ್ಟವಾದಂತಹ ಒಂದು ಗ್ರಂಥ ಇಲ್ಲವೆಂಬುದು ಖಚಿತ. ಒಬ್ಬರು ಒಂದು ಗ್ರಂಥ ತೋರಿಸಿದರೆ ಮತ್ತೊಬ್ಬರು ಮತ್ತೊಂದು ಗ್ರಂಥವನ್ನು ತೋರಿಸುವ ಸಾಧ್ಯತೆ ಬಹಳವಾಗೆ ಇದೆ. ಇದು ಏನನ್ನು ಸೂಚಿಸುತ್ತದೆ? ನಮಗೆ ಯಾವುದೇ ನಿಖರವಾದ ಗ್ರಂಥವಿಲ್ಲ ಎಂದು. ಈ ಹಂತದಲ್ಲಿ ಆರ್.ಎಸ್.ಎಸ್ ವಿರೋದಿ ಗುಂಪಿನ ವಾದವು(ರಾಷ್ಟ್ರೀಯತೆ ಕಲ್ಪನೆ ಪರಕೀಯ, ಸ್ಥಳೀಯ ಸಂಸ್ಕೃತಿಗಳು ವೈವಿಧ್ಯಮಯವಾದ ಆಹಾರ ಪದ್ದತಿಗಳು ಹೊಂದಿವೆ ಒಂದೇ ತೆರನಾಗಿಲ್ಲ) ಕೊಂಚ ವಾಸ್ತವತೆಯ ಕಡೆಗೆ ಬೆರಳು ಮಾಡಿದರು ಪುನಃ ಅವರು ಗ್ರಂಥಗಳ ಅನುಮೋದನೆಗೆ ಜೋತು ಬಿದ್ದು, ಆರ್.ಎಸ್.ಎಸ್ ವಾದಿಸುವಂತೆಯೇ ವಾದಿಸುವುದು ಸ್ಪಷ್ಟವಾಗುತ್ತದೆ.

ಈಗ ನಾವು ಇವರಿಬ್ಬರ ವಾದಗಳಲ್ಲಿ ಒಂದು ಸಾಮ್ಯತೆಯನ್ನು ಗುರುತಿಸಬಹುದು: ಗ್ರಂಥಗಳ ಅನುಮೋದನೆ. ಆರ್.ಎಸ್.ಎಸ್.ನವರು ಹಿಂದೂ ಸಾಮ್ರಾಜ್ಯ ಕಟ್ಟುವ ನಿಟ್ಟಿನಲ್ಲಿ ಹಿಂದೂಗಳು ಪವಿತ್ರ ಗ್ರಂಥ ಹೊಂದಿದ್ದಾರೆ ಎಂದು ವಾದಿಸುತ್ತಾರೆ. ಹಾಗೆಯೇ ಅದರ ವಿರೋಧಿ ಬಣಗಳು ತಾವು ವೈವಿಧ್ಯತೆಯನ್ನು ಹೊಂದಿದವರು ಎಂದು ಹೇಳಿಕೊಳ್ಳುತ್ತಲೆ, ಒಂದು ಕಾರ್ಯಕ್ಕೆ( ಗೋಹತ್ಯೆ ಮುಂದುವರೆಯಲು) ಗ್ರಂಥಗಳ ಅನುಮೋದನೆ ಬೇಕು ಅದು ಇದೆ ಎಂದು ತೋರಿಸುತ್ತಾರೆ. ಹಾಗಾಗಿ ಮೇಲ್ನೊಟಕ್ಕೆ ಇವರಿಬ್ಬರು ವಿರೋಧಿಗಳು ಎನಿಸಿದರು ಆಳದಲ್ಲಿ ಇವರಿಬ್ಬರ ಆಲೋಚನೆಯು ಒಂದೇ ಚೌಕಟ್ಟಿನಡಿಯಲ್ಲಿ ಸಿದ್ಧಗೊಂಡಿದೆ. ಹಾಗಾಗಿ ವಿರೋಧದಲ್ಲಿಯೂ ಸಾಮತ್ಯೆಯು ಬರುವಂತೆ ಸಾಧ್ಯ ಮಾಡಿದ್ದು ಇವರು ಹಿಂಧೂ ಧರ್ಮ(ರಿಲಿಜನ್) ಕುರಿತು ಹೊಂದಿರುವ ಗ್ರಹಿಕೆ, ಈ ಎರಡು ಬಣಗಳ ವಾದ ಅವುಗಳಿಂದ ಏಳುವ ಪ್ರಶ್ನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಆದರೆ ನಮ್ಮ ಜವಾಬ್ದಾರಿ ಎಂದರೆ ಈ ಎರಡು ಬಣಗಳಲ್ಲಿ ನಾವು ಎಲ್ಲಿ ನಿಲ್ಲುತ್ತೇವೆ, ಅಥವಾ ಈ ಎರಡು ಬಣಗಳಿಂದ ಹೊರತಾದ ಇನ್ನೊಂದು ಸ್ಥಳವಿದೆಯಾ ಎಂದು ಕಂಡುಕೊಳ್ಳುವುದು.

Advertisements
 1. Rani
  ಜುಲೈ 30, 2010 ರಲ್ಲಿ 6:12 ಅಪರಾಹ್ನ

  I’m an ardent reader of your articles. They are usually quite interesting and thought provoking. But, to be honest, I’m quite disappointed with this article. You people seem to be making a particular line of argument into your brand identity and brand image: finding faults with both secularists and hindutva vadins. I’m not a supported of either of them, but I feel that criticising them shouldn’t become the brand image of your group.

  I would like you people to reflect on problems like ban on cow slaughter rather directly and tell us what to make of it or how to solve them. In several cases, it is true that the problem talked about doesn’t even exist (e.g. the caste system). In such a case, it is useful to see how the two opposing groups of intellectual conceive it. But, in the case of ban on cow slaughter, the situation is rather different. Whatever position you take, you will end up hurting a community. If you ban cow slaughter, it hurts those castes and religious communities that have been eating beef. If you allow cow slaughter, it can be argued that, it hurts the sentiments of those who ‘worship’ it. (I personally think that this argument is rather weak and ban on cow slaughter is quite a preposterous move.) If so, I invite you people to think on this problem directly and see if you can suggest a way out.

  Like

  • ಅಕ್ಟೋಬರ್ 28, 2010 ರಲ್ಲಿ 8:40 ಅಪರಾಹ್ನ

   ರಾಣಿಯವರೆ, ಧರ್ಮಗ್ರಂಥಗಳನ್ನು ಆಧರಿಸುವುದರಲ್ಲಿ ಇರುವ ಸಮಸ್ಯೆಯನ್ನು ಹೇಳುವುದು ಮತ್ತು ಸಮುದಾಯಗಳು ಹಿಂದಿನ ರೂಢಿ, ಆಚರಣೆಗಳ ಮೂಲಕ ಬದುಕುತ್ತವೆ ಅನ್ನುವಾಗ, ಗೋಮಾಂಸವನ್ನು ನಿಷೇಧಿಸಬಾರದು ಎನ್ನುವ ಅಭಿಪ್ರಾಯ ಎವಿಡೆಂಟ್ ಆಗುತ್ತೆ ಅಲ್ವೆ? ಮತ್ತು ನನ್ನ ದೃಷ್ಟಿಯಲ್ಲಿ ಅದು ಸರಿಯಾದ ನಿಲುವಾಗಿದೆ. -ಗಿರೀಶ

   Like

 2. shankarappa
  ಜುಲೈ 31, 2010 ರಲ್ಲಿ 10:41 ಫೂರ್ವಾಹ್ನ

  ರಾಣಿಯವರೇ,
  ಕೇವಲ ವಿಮರ್ಶೆ ಮಾಡುವುದರಿಂದ ಯಾವುದೇ ಗುಂಪಿಗೆ ಬ್ರಾಂಡ್ ಆಗಲಿ ಅಥವಾ ಗುರುತಾಗಲಿ ಸಿಗುವುದಿಲ್ಲ ಎಂದು ನೀವು ಹೇಳುವುದು ನಿಜ. ಆದರೆ, ಯಾವುದೇ ವಾದದಲ್ಲಿರುವ ಸಮಸ್ಯೆಯನ್ನು ತೋರಿಸುವುದರಿಂದಾಗುವ ತಪ್ಪಾದರೂ ಏನೆಂದು ಅರ್ಥವಾಗಲಿಲ್ಲ.

  ನಿಮ್ಮ ವಾಕ್ಯಗಳಲ್ಲಿರುವ ಗೊಂದಲಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ: <>

  ಈ ಮೇಲಿನ ವಾಕ್ಯಗಳಲ್ಲಿ ಹಿಂದೂ ರಾಷ್ಟ್ರಿಯವಾದಿಗಳಲ್ಲಿ ಹಾಗು ಸೆಕ್ಯುಲರ್ವಾದಿಗಳಲ್ಲಿ ಇರುವ ಗ್ರಹಿಕೆಗಳು ಯಾವುವು? ಎಂಬುದನ್ನು ತಿಳಿದುಕೊಳ್ಳುವ ಬದಲು, ಸಮಸ್ಯೆಯನ್ನು ಸಮುದಾಯಗಳಿಗೆ ವರ್ಗಾಯಿಸಿ ಮೌಲ್ಯಕರಿಸುತ್ತಿರಿ. ಅಂದರೆ ಗೋಮಾಂಸ ಸೇವನೆ ಕೆಲವು ಸಮುದಾಯಗಳಿಗೆ ಇಷ್ಟ ಮತ್ತೆ ಕೆಲವಕ್ಕೆ ಇಷ್ಟವಿಲ್ಲ ಎಂದು ಹೇಳಿ ಇದೊಂದು ಧರ್ಮಸಂಕಟದ ವಿಷಯವಾಗಿ ಮಾರ್ಪಡಿಸುವುದು. ಇದರಿಂದಾಗುವ ಪರಿಣಾಮವೆಂದರೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲಾಗದಿರುವುದು. ನಿಮಗೆ ಮತ್ತೊಂದು ವಿಷಯ ಹೇಳಬೇಕೆಂದಿದ್ದೇನೆ: ಗೋಮಾಂಸ ಸೇವಿಸುವವರು ಸಹ ಗೋಪೂಜೆಯನ್ನು ಮಾಡುತ್ತಾರೆ ಎಂಬುದನ್ನು ಮರೆಯಬಾರದು.

  ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯವೆಂದರೆ: ಭಾರತದ ವಿವಿಧ ಸಂಪ್ರದಾಯಗಳು ಗೋಮಾಂಸ ಸೇವನೆಗೆ ಸಂಬಂದಿಸಿದಂತೆ ಯಾವ ನಿಲುವನ್ನು ತೆಗೆದುಕೊಳ್ಳುತ್ತವೆ ಎಂಬುದು (ಆರ್. ಎಸ್. ಎಸ್. ಮತ್ತು ಸೆಕ್ಯುಲರ್ ವಾದಿಗಳು ಬಿಟ್ಟು). ಈ ನಿಲುವನ್ನು ಭಾರತೀಯ ಸಂಪ್ರದಾಯಗಳ ಉದಾಸಿನತೆಯ ಕಲ್ಪನೆಯನ್ನು ಮೂಲಕ ಅರ್ಥ ಮಾಡಿಕೊಳ್ಳಬಹುದು ಎಂಬುದು ನನ್ನ ಅನಿಸಿಕೆ. ಅಂದರೆ ಭಾರತದ ಹೆಚ್ಚಿನ ಸಂಪ್ರದಾಯಗಳು ಬೇರೆ ಸಂಪ್ರದಾಯಗಳಲ್ಲಿನ ಆಹಾರ ಸೇವನೆ, ಆಚರಣೆಗಳಿಗೆ ಸಂಬಂದಿಸಿದಂತೆ ಹಸ್ತಕ್ಷೇಪ ಮಾಡುವುದಿಲ್ಲ (ಬೇರೆ ಸಂಪ್ರದಯಗಳೆಂದರೆ: ಬೇರೆ ಬೇರೆ ಜಾತಿಗಳು, ಪಂಥಗಳು, ರಿಲಿಜನ್ ಗಳು).

  ಇಂತಿ
  ಶಂಕರ್

  Like

 3. Dunkin
  ಜುಲೈ 31, 2010 ರಲ್ಲಿ 12:46 ಅಪರಾಹ್ನ

  Dear ಶಂಕರ್-avare,

  Appreciate your reply to Rani, and your points are well taken. However, I do not quite follow some of your points. Here is one of them: “ಸಮಸ್ಯೆಯನ್ನು ಸಮುದಾಯಗಳಿಗೆ ವರ್ಗಾಯಿಸಿ ಮೌಲ್ಯಕರಿಸುತ್ತಿರಿ.” I’m not clear what you mean by this. The problem of ban on cow-slaughter is a problem of how communities see each other and deal with each other’s cultural preferences and differences. I agree that some of the colonial and post-colonial political and other developments have contributed to it. But then, at least some sections of our society have made it their own. To that extent, it is a problem of communities. What I don’t understand in your comments is this: what is wrong in seeing the problem as a community problem? Why do you think that “ಇದರಿಂದಾಗುವ ಪರಿಣಾಮವೆಂದರೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲಾಗದಿರುವುದು.” Can you explain to me why do you say this?

  The ‘indifference’ (ಉದಾಸಿನತೆ) that you talk about is indeed one possible solution to the problem in question. I remember some discussion on this notion on the Yahoo forum. However, it is not clear to me what does ‘indifference’ mean here? Who should be indifferent to whom or what? What should the state do? How practical is it?

  To Rani, this is what I want to say. (First of all, thanks for your concerns.) I agree her concerns about making one kind of criticism into our brand image. However, I ask her to see the problem from this angle too. It is quite possible that this problem of cow slaughter is just a symptom of a larger problem that we are facing today. The problem has to do with the way we have confronted colonialism and shaped our own traditions. One way of beginning to get a sense of this problem is to see how people understand this (and other such) problems and respond to it. What Kavitha and Sandeep have done is to start such an inquiry.

  Hope these comments help. May be when the authors rewrite this article for a journal or a magazine, they can incorporate some these issues and confront some of the problems raised here.

  Yours,

  Dunkin

  Like

 4. Sandeep Shetty
  ಜುಲೈ 31, 2010 ರಲ್ಲಿ 12:47 ಅಪರಾಹ್ನ

  Ms Rani
  Thank you for your comment and it’s nice to know that you follow our blog regularly and like the articles too. Well about your comments, we are not just trying to find faults in the arguments of both secularists and the hinduthvavadis and make it as our identity or brand name. This is been an attempt to figure out what is going on in India in the name of secularism or hindutva. After so many years of social reforms, social change, legislations which based on the understanding of the Indian society by the above said groups. This boils down to a point which shows that these ideologies in themselves should have some flaws or they have failed to understand the Indian society itself. This attempt is one of such attempt to find the faults and call for a new way or a new approach to understand the Indian society.

  Your question about the problem of cow slaughter and the issues around it, I would like you to inform that all these debates are of recent past. You would be aware that this issue was somewhat prevalent during the Gandhian era in the freedom movement and after that there wasn’t much heard about both in the society or in the intellectual debates. Cow slaughter or eating of the cow wasn’t a new thing in India, from centuries it was there and it is not just one community that is practicing it. So there must be some link missing which prevented this entire cry about ban or not banning the cow slaughter. But this became problem (or the problem of Hindu Nationalist and of secularists) in recent years. As you pointed out whatever stand we take is going to hurt some part or the other in the society. In order to prevent that there is need to look for the missing link which made the people to co-exist in the Indian society. That is what we are doing in this centre. So it’s an attempt to understand the problem and of reaching the roots of the problem and trying to solve it instead of doing it superficially.
  Regards
  Sandeep

  Like

 5. bhadravathi
  ಜುಲೈ 31, 2010 ರಲ್ಲಿ 1:03 ಅಪರಾಹ್ನ

  “ನಮ್ಮ ನಿತ್ಯ ಜೀವನದ ಆಗು ಹೋಗುಗಳನ್ನು ನಾವು ಗ್ರಂಥಗಳ ನಿರ್ದೇಶನದಿಂದಲೇ ರೂಪಿಸಿಕೊಳ್ಳುತ್ತೆವೆಯೇ? ಅಥವಾ ಗ್ರಂಥಗಳು ನಮ್ಮ ಸಮಾಜವನ್ನು ಹಾಗೂ ನಮ್ಮ ಜೀವನವನ್ನು ರೂಪಿಸುತ್ತಿವೆಯೇ?”

  ಜಾತಿ ವ್ಯವಸ್ಥೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತಾ ಬರುತ್ತಿರುವುದಕ್ಕೆ ವೇದಗಳಲ್ಲಿರುವ ನಿರ್ದೇಶನಗಳೇ ಕಾರಣ ಅಲ್ಲವೇ? ಇದನ್ನು ಹೇಗೆ ಸಮರ್ಥಿಸುತ್ತೀರಾ?

  Like

 6. ಜುಲೈ 31, 2010 ರಲ್ಲಿ 2:40 ಅಪರಾಹ್ನ

  ಹಲೋ ಗೆಳೆಯರೆ,

  ಜಾತಿ ವ್ಯವಸ್ಥೆಯನ್ನು ವೇದಗಳು ನಿರ್ದೇಶಿಸುತ್ತವೆ ಎಂದು ನೀವು ಭಾವಿಸಿಕೊಂಡಿರುವುದರಲ್ಲಿಯೇ ದೋಷವಿದೆ.
  ಭಾರತದಲ್ಲಿ ಹಲವಾರು ವೈವಿಧ್ಯಮಯ ಜಾತಿಗಳಿವೆ ಆದರೆ ’ವ್ಯವಸ್ಥೆ’ ಇಲ್ಲ ಇನ್ನೂ ಹಲವಾರು ಗ್ರಂಥಗಳಿವೆ ಅವುಗಳು ಯಾವುದೇ ಸಮುದಾಯ/ಜಾತಿಯನ್ನು ನಿರ್ದೇಶಿಸುವುದಿಲ್ಲ. ನಿಮ್ಮ ಪ್ರಶ್ನೆಗೆ ನೀವೆ ಉತ್ತರ ಕಂಡುಕೊಳ್ಳುವುದಾದರೆ ಒಂದು ಸಣ್ಣ ಹಾಗೂ ಸರಳ ತಂತ್ರವಿದೆ. ಕುತೂಹಲಕ್ಕೆ ನಿಮ್ಮ ನೆರೆಹೊರೆಯವರನ್ನೆ ಪ್ರಶ್ನಿಸಿ ನೋಡಿ ವೇದಗಳು ಅವರ ನಿತ್ಯ ಜೀವನದಲ್ಲಿ ಎಷ್ಟು ಮಹತ್ವದ ಪಾತ್ರ ನಿರ್ವಹಿಸುತ್ತವೆ/ನಿರ್ದೇಶನ ನೀಡುತ್ತವೆ ಎಂದು, ಅಥವಾ ಅವರು ಆಚರಿಸುವ ಯಾವುದೇ ಆಚರಣೆಗಳಿಗೂ/ಪೂಜೆಗಳಿಗೂ ಯಾವುದಾದರೂ ಆಧಾರ ಗ್ರಂಥವಿದೆಯೇ? ಇದೆ ಎಂದಾದರೆ ಯಾವುದೂ ಇಲ್ಲವೆಂದರೆ ಯಾವುದು ನಿರ್ದೇಶನ ಕಾರ್ಯವನ್ನು ಮಾಡುತ್ತದೆ? ಎಂಬುದನ್ನು ಕೇಳಿ ನೋಡಿ( ಒಂದು ಪಕ್ಷ ನಿಮಗೆ ಉತ್ತರ ದೊರೆತರೆ ನಮ್ಮೊಂದಿಗೂ ಹಂಚಿಕೊಳ್ಳಿ ಚರ್ಚೆ ಮುಂದುವರೆಸಲು ಅನುಕೂಲವಾಗುವುದು) ಆಗ ನಿಮಗೆ ತಿಳಿಯುವುದು ನೀವೂ ಹೊಂದಿರುವ ತಿಳುವಳಿಕೆ ಎಷ್ಟು ವಾಸ್ತವಿಕತೆಯನ್ನು ಪ್ರತಿನಿಧಿಸುತ್ತದೆ ಎಂದು.
  ಆದರೆ ನಿಮಗೆ ಈ ರೀತಿಯ ಪ್ರಶ್ನೆ ಏಳುವುದು ಸಹಜ. ಏಕೆಂದರೆ ನಮ್ಮ ಶಿಕ್ಷಣದಲ್ಲಿ/ಪಠ್ಯಗಳಲ್ಲಿ ಏಡೆ ಬಿಡದೆ ಭಾರತೀಯ ಸಮಾಜದ ಕುರಿತಂತೆ ಉಲ್ಲೇಖಿಸುವುದು ಇದೇ ರೀತಿಯಾಗಿ: ಭಾರತದಲ್ಲಿ ಜಾತಿ ವ್ಯವಸ್ಥೆ ಇದೆ, ವೇದಗಳು ಅಥವಾ ಗ್ರಂಥಗಳು ವ್ಯವಸ್ಥೆಯನ್ನು ನಿರ್ದೇಶಿಸುತ್ತವೆ, ಅದರಂತೆ ಪ್ರತಿಯೊಬ್ಬ ಭಾರತೀಯನು ಜೀವನ ಸಾಗಿಸುತ್ತಾನೆ, ವೇದಗಳು ಸಮಾಜವನ್ನು, ಜನಸಮುದಾಯವನ್ನು ನಿಯಂತ್ರಿಸುತ್ತವೆ . . . .ಈ ಪ್ರಕಾರದ ಶಿಕ್ಷಣ ಪಡೆದ ನಾವುಗಳು ಸಹ ಇದನ್ನು ಪುನರುಚ್ಚಿಸುವುದರಿಂದ ಹೊರತಲ್ಲ. ಈ ರೀತಿಯ ವಿವರಣೆಗಳು ನಿಜವೇ ಎಂದು ತಿಳಿಯಬೇಕಾದರೆ ಇಂಥ ವಿವರಣೆಗಳನ್ನು ಪರಿಶೀಲಿಸಬೇಕು, ಅದರ ಹೊರತು ಪುನರುಚ್ಚಿಸುವಿಕೆ ಮುಂದುವರೆಯುತ್ತದೆ.
  ಹಾಗಾಗಿ ಇಲ್ಲಿಯವರೆಗೂ ನಾವು ಪಡೆದುಕೊಂಡಿರುವ, ಪಡೆದುಕೊಳ್ಳುತ್ತಿರುವ ಶಿಕ್ಷಣವು ಈ ರೀತಿಯ ಪ್ರಶ್ನೆಗಳನ್ನು ಕೇಳುವಂತೆ ಮಾಡಿದೆ, ಅವುಗಳು ನಮ್ಮ ವಿಚಾರಗಳೇ ಎಂದು ನಾವು ಭಾವಿಸಿಕೊಂಡಿದ್ದೇವೆ. ಆ ಶಿಕ್ಷಣದ ಪರದೆಯನ್ನು ಕೊಂಚ ಸರಿಸಿದರೆ ವಾಸ್ತವವನ್ನು ಅರಿಯಲು ಸಹಾಯವಾಗಬಹುದು. ಚುಟುಕಾಗಿ ಹೇಳುವುದಾದರೆ, ಪಠ್ಯಗಳಲ್ಲಿ/ಸಮಾಜ ವಿಜ್ಞಾನದಲ್ಲಿ ಭಾರತೀಯ ಸಮಾಜವನ್ನು/ಜಾತಿ ’ವ್ಯವಸ್ಥೆ”ಯನ್ನು ವಿವರಿಸಿರುವುದಕ್ಕೂ, ವಾಸ್ತವವಾಗಿ ನಮ್ಮ ಸಮಾಜವು ಇರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

  -ಕವಿತಾ

  Like

 7. bhadravathi
  ಜುಲೈ 31, 2010 ರಲ್ಲಿ 3:34 ಅಪರಾಹ್ನ

  ಹಾಗಾದರೆ ಮನು ಧರ್ಮ ಶಾಸ್ತ್ರದಲ್ಲಿ ಜಾತಿಯ, ವರ್ಣಗಳ ಉಲ್ಲೇಖವಿಲ್ಲ ಅಲ್ಲವೇ? ಜಾತಿಯ ಬಗೆಗಿನ ತಪ್ಪು ತಿಳಿವಳಿಕೆಗೆ ಇಂದಿನ ಶಿಕ್ಷಣವನ್ನು ದೂರುತ್ತಿದ್ದೀರಿ, ಹಾಗಾದರೆ ತಾವು ಯಾವ ರೀತಿಯ ಶಿಕ್ಷಣವನ್ನು prescribe ಮಾಡುತ್ತೀರಿ?

  Like

  • ಆಗಷ್ಟ್ 1, 2010 ರಲ್ಲಿ 10:49 ಫೂರ್ವಾಹ್ನ

   ಆತ್ಮೀಯ “ಭದ್ರಾವತಿ”ಯವರೇ,
   ೧) ಖಂಡಿತವಾಗಿಯೂ ಈಗಿನ ಸಮಾಜ ವಿಜ್ಞಾನದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲೇಬೇಕಾದ ಅನಿವಾರ್ಯತೆ ನಮ್ಮ ನಿಮ್ಮಂತಹ ಈಗಿನ ಪೀಳಿಗೆಯವರಿಗೆ ಅನಿವಾರ್ಯವಾಗಿದೆ. ಯಾಕೆಂದರೆ ನಮ್ಮ ಸಮಾಜವಿಜ್ಞಾನಗಳಲ್ಲಿನ ಭಾರತೀಯ ಸಮಾಜದ ವಿವರಣೆಗಳು ಪಾಶ್ಚಾತ್ಯರು ತಮ್ಮ ಸಾಂಸ್ಕೃತಿಕ ಅನುಭವದ ಹಿನ್ನೆಲೆಯಲ್ಲಿ ವಿವರಿಸಿರುವುದಾಗಿದೆ. ಅವರು ಭಾರತದ ಸಮಾಜವನ್ನು, ಸಂಪ್ರದಾಯಗಳನ್ನು ರಿಲಿಜನ್ನಿನ(ಕ್ರಿಶ್ಚಿಯನ್) ಮಾದರಿಯದೆಂದು ಗ್ರಹಿಸಿದರಲ್ಲದೇ, ಹಾಗೆಯೇ ವಿವರಿಸಿ ಭಾರತೀಯ ಸಮಾಜದ ನೈಜ ವಿವರಣೆಯೆಂದು ನಿರೂಪಿಸಿದರು.
   ೨) ಯಾವ ರೀತಿಯ ಶಿಕ್ಷಣವನ್ನು ನಾವು ನೀರಿಕ್ಷಿಸುತ್ತಿದ್ದೇವೆಂದರೆ, ನಮ್ಮದೇ ಸ್ವಂತ ಅನುಭವದ ಆಧಾರದ ಮೇಲೆ ಸೃಷ್ಟಿಯಾದ ನಮ್ಮ ಸಮಾಜದ/ಸಂಸ್ಕೃತಿಯ ವಿವರಣೆಯನ್ನು ಹೊಂದಿದ ಸಮಾಜ ವಿಜ್ಞಾನಗಳು. ಇಂತಹ ಸಮಾಜ ವಿಜ್ಞಾನಗಳ ಸೃಷ್ಟಿ ನಮ್ಮಿಂದಲೇ ಆಗಬೇಕಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

   ಧನ್ಯವಾದಗಳೊಂದಿಗೆ,
   ಪ್ರವೀಣ್
   ಸಿ. ಎಸ್. ಎಲ್. ಸಿ

   Like

 8. Vasanth
  ಆಗಷ್ಟ್ 1, 2010 ರಲ್ಲಿ 12:13 ಫೂರ್ವಾಹ್ನ

  If we see common people without referencing anything they have been eating beef and other meat products. it is a blunder from BJP to ban on beefing eating. let common man decide what he wants to eat or not. The govt. has no rights.

  Like

 9. prajna
  ಆಗಷ್ಟ್ 1, 2010 ರಲ್ಲಿ 10:42 ಫೂರ್ವಾಹ್ನ

  Dear Bhadravati,

  The present article does not claim that it has a ready made solution and is advertising about that. It is talking about the way we think about a phenomenon like ‘cow-slaughter issue’;whether it could be solved without hurting any communities (since the issue is not just whether an individual wants to eat beef or not).
  Look at the way the issue is discussed nowadays. You could be either supporting cow-slaughter, or could be against it as if you have only two options. Look at the way you support it:it is the right of different communities having different food habits and they should be allowed to have it, don’t bring ‘religion’ into it, be secular, and your own ‘texts’ sanction etc. and, look at the way you protest: Hindu texts do not sanction that, Hindus are this and that,and thus hurts our feelings. Ironically none of the above stances are giving any solutions as such to decide whether it is possible to have a solution without hurting the sentiments of the communities concerned. They just are happy over the fact that they are concerned about ‘some’ issue! and,
  being neutral (or indifferent) would be not just impracticable but also unfair. Simply because the tensions will not stop anyway for the reason that we are indifferent.
  Then the question arises what do we mean by religion, Hindu religion, whether it exists or not, to what extent Hindus(?) follow their texts (are the texts mandatory?), what is it to be ‘secular’ etc. The article makes such an attempt to raise the issue at least. But it needs refinement Kavita and Sandeep. Specially at the end you resolve by saying that “our responsibility is to locate where we stand…” The aim is not to locate where we stand, that is from where our discussion begins however.
  For instance, what happens when we forget that we are Hindus? Think for a while that you were not aware of Hinduism (if it exists)at all, think you were on an alien land! You are a beef eating person and there are many like you there. and there are persons who do not eat beef and they can not tolerate cow slaughter. hostility grows gradually. in such a situation how do they decide how to solve the problem and live happily? They are not aware of any texts, any ‘religion’. I leave the matter here and invite you to think over it. Take your time.

  prajna

  Like

 10. ಆಗಷ್ಟ್ 2, 2010 ರಲ್ಲಿ 11:21 ಫೂರ್ವಾಹ್ನ

  ಆತ್ಮೀಯ ಪ್ರಜ್ಞಾ,

  ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು. ಖಂಡಿತವಾಗಿಯೂ ಈ ಎರಡು ಬಣಗಳಲ್ಲಿ ಯಾವುದಾದರು ಒಂದು ನಿಲುವು ತೆಗೆದುಕೊಳ್ಳುವುದು ನಮ್ಮ ಉದ್ದೇಶವಲ್ಲ. ಬದಲಾಗಿ ಇಂದಿನ ಬೌದ್ಧಿಕವಲಯದಲ್ಲಿ ತೀವ್ರವಾಗಿ ಚರ್ಚೆಗೊಳಗಾಗುತ್ತಿರುವ ಈ ಎರಡು ನಿಲುವುಗಳಲ್ಲಿರುವ ದೋಷಗಳನ್ನು ಮಾತ್ರ ಈ ಹಂತದಲ್ಲಿ ಗುರುತಿಸುತ್ತಿದ್ದು, ಮುಂದಿನ ಹೆಜ್ಜೆ ಇವೆರಡೂ ನಿಲುವುಗಳಿಂದ ಹೊರತಾದ ಹೊಸ ದೃಷ್ಟಿಕೋನದಿಂದ ಭಾರತೀಯ ಸಮಾಜವನ್ನು ಹೇಗೆ ಅರ್ಥೈಸಿಕೊಳ್ಳುವುದು ಎಂಬುದಾಗಿದೆ. ಆ ಕೆಲಸವನ್ನು ನಾವೆಲ್ಲರು ಸೇರಿ ಮಾಡಬೇಕಾಗಿದೆ.
  -ಕವಿತಾ

  Like

 11. Shaalmala
  ಆಗಷ್ಟ್ 2, 2010 ರಲ್ಲಿ 11:47 ಫೂರ್ವಾಹ್ನ

  The title looks promising, however it fails to meet the expectations, for, you have deviated your argument from the focus as implied in the title, “whether or not cow-slaughter be banned”, to a different one, “the underlying motif of the two factions” in the cow-slaughter debate. It would have been good if you had discussed the possible socio-cultural ramifications of “cow-slaughter” in the present socio-economic context, for a better understanding of the issue, which is quite necessary for the interested individuals like me.

  Nevertheless to continue with your writeup: I think, even your argument about their underlying motif, which says that, the two groups with seemingly opponent arguments basically derive their views from a common belief about religion, and therefore the opponent faction unknowingly favors the argument of the first group, does not appear strong. Because in this case, the attempt by the opponent faction to seek the support of the texts, is only a convenient means to vehemently oppose the views of the other faction, which is in favor of the cow-slaughter and to stall the move, rather than to establish its own views. It looks more of a frantic attempt by the opponent faction to gain a political mileage from the ongoing developments as against sustaining its arguments. Because in the first place, this opponent faction is not a strong proponent of “akhanda raashtriyathe”, so even if its views are accepted (say notionally), how do you say that it will indirectly support RSS’ overall viewpoints. It will not bring any change in the overall situation. Will it?

  Since the opponents’ stance is politically driven most of the times, the question of whether or not they share a common belief with the other faction becomes superfluous in the context of the “cow-slaughter” debate. Then one might want to ask: “even if they shared, it would be interesting to know what would happen to the cow slaughter issue?”

  But mind you, this is not the first time that we are watching the opponent faction turning towards the texts. On many earlier occasions too we have seen people (whether pro or against an issue) turning towards the texts for claiming their stakes on all possible social issues. But what is more important here I think is to stop ascribing too much importance to the basic premises these people may have carried and debating on how debilitating the arising implications have been, but instead to start thinking: how to re-form and re-structure these basic foundations so that the society gets benefitted, how to initiate the necessary dialogue, how to reorient and engage the present day social scientists in that direction…and on many such clueless problems.

  thanks

  Shaalmala

  Like

  • Sandeep Shetty
   ಆಗಷ್ಟ್ 2, 2010 ರಲ್ಲಿ 4:51 ಅಪರಾಹ್ನ

   Hi Shaalmala,

   About the title, I don’t think that the title was in any way misleading.

   We concentrated on the debates and the basic frameworks that have been used by these groups. What we have tried is to find out what kind of thinking has finally led to this kind of socio-cultural developments/conflicts. “I hope this would create more interest and improve the understanding of the problem itself instead of increasing it.” We haven’t argued that they both favour each other or one favours the other. Our point is this: the assumptions behind the claims of both these groups are problematic. To tackle a problem one has to see the basic foundation on which it is standing. Only then can one begin to figure out the solution. I’m not sure how citing various texts and critiques will solve the problem.

   In order to attempt to reform and restructure one need to know what are the problems and why they still exist after so many years of research, reforms and legislations. There can be two possibilities for this failure: one is we haven’t done enough to solve the problem or the other is we have been failed to understand the problem itself. If you agree with the first possibility then another question raises. What more needs to be done or what is wrong and as you said it becomes a clueless problem which leads us to the other proposition that we have failed to understand the problem itself. Now what we are doing is that the exploring the later and coming up with the problems of hereto existing notions. Let’s see how we can come up with new ideas or theories which would give new direction to the present world social scientists on “such clueless problems”

   Thanks
   Sandeep

   Like

   • Shaalmala
    ಆಗಷ್ಟ್ 3, 2010 ರಲ್ಲಿ 1:16 ಅಪರಾಹ್ನ

    Hi Sandeep,

    I request you to go through my earlier comments carefully. It appears that you haven’t grasped my points properly. And accordingly I couldn’t get some of your responses clearly.

    These comments of mine were related to the entire write-up and its only incidental that I began with a point about the Title of the write-up. I hadn’t said, the title was misleading, as you have wrongly noted. I only said that, the title looks promising, however it (the write-up) fails to meet the expectations, as you have deviated your focus. This is what your write-up had done and my expectation to know more on cow-slaughter was quite but natural in the light of the ongoing debate.

    In my comments I also said that sufficient priority be given to address many “clueless questions” instead of debating too much on the origin of the basic premises in the underlying assumptions of the 2 factions. By saying so, I didn’t mean that you people should start reorienting the social scientists, as you have wrongly noted. I know that, its easier said than done. I only said that such “clueless problems” be taken as your priority topics of discussion.

    But, it would mean that it is necessary to spark the process of understanding the “clueless problems” on a priority basis. This will in turn contribute to bringing about a change in the ways of doing social science in India. I do agree that these write-ups here are the starting points in that direction. But I feel they require some more refinement and strong arguments.

    It would be good to have focused write-ups on such “clueless problems”

    Thanks

    Shaalmala

    Like

 12. prajna
  ಆಗಷ್ಟ್ 3, 2010 ರಲ್ಲಿ 3:10 ಅಪರಾಹ್ನ

  Dear Shaalmala,

  You have used “clueless problems” many times in your response. I would like to know what exactly you have in your mind when you say that there are many “clueless problems” related to ‘cow-slaughter’issue. It would be nice if you could talk about your ideas on such “clueless problems” so that students like me can benefit more and that would help this discussion forum too.

  regards,
  prajna

  Like

  • Shaalmala
   ಆಗಷ್ಟ್ 4, 2010 ರಲ್ಲಿ 11:28 ಫೂರ್ವಾಹ್ನ

   Hi Prajnaa,

   You are again mistaken. I have not stated anywhere in my comment that there are clueless problems related to “cow-slaughter” issue, as you have wrongly pointed in your response. Had I known any such clueless problem about the debate, I wouldn’t have sifted through the pages of this blog for the want of more information. If you revert back to my first comment and go through it carefully you will realize this.

   There is also no big deal about the word “clueless problem” as you have wondered. Please consult the last para in my first comment where I have listed some issues as examples and said these and such are “clueless problems” which need to be looked at on a priority basis than to get into polemics. I said so because I find such issues are critical to be addressed, but there is not sufficient clarity about them. Everybody agrees that these issues are very important but one doesn’t know as to how to begin addressing them. To me, such critical issues which are more heard and talked about in an excited tone, than properly probed and understood, become the “clueless problems”. Many such are already amidst us about which the common man does not even possess a minimum level of clarity but feel perplexed. Sandeep also concurred in his response that a critical issue becomes “clueless” when there is no clarity. As of now this is my understanding of a “clueless problem”. Hope it has clarified your doubt.

   I think there is a need to look at such issues from an altogether different perspective to get a hold of it. May be then one will arrive at a better picture of the issue.

   Thanks
   Shaalmala

   Like

 1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: