ಮುಖ ಪುಟ > Cultural Studies, Culture, Dharma, Hindu, Religion > ಪುಸ್ತಕ ಬಿಡುಗಡೆ ಕಾರ್ಯಕ್ರಮ : “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”

ಪುಸ್ತಕ ಬಿಡುಗಡೆ ಕಾರ್ಯಕ್ರಮ : “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”

BOOK RELEASE FUNCTION

ಆಂಗ್ಲ ಭಾಷೆಯಲ್ಲಿ ಪ್ರೋ. ಬಾಲಗಂಗಾಧರ ಅವರು ರಚಿಸಿದ ಕೃತಿ The Heathen in his Blindness…Asia the West and the Dynamic of Religion ಇದರ ಕನ್ನಡಾನುವಾದ  “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ”  ಕೃತಿಯ ಬಿಡುಗಡೆ ಕಾರ್ಯಕ್ರಮ ತಾರೀಕು ೨೯-೦೮-೨೦೧೦ನೆಯ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಅಕ್ಷರ ಪ್ರಕಾಶನ, ಹೆಗ್ಗೋಡು ಪ್ರಕಟಿಸಿರುವ ಈ ಕೃತಿಯನ್ನು ಖ್ಯಾತ ಪತ್ರಕರ್ತ ರವಿ ಬೆಳೆಗೆರೆ ಲೋಕಾರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಳು ಸಾಧ್ಯವಿಲ್ಲ, ಹೊರಗಿನವರ ಪರಿಭಾಷೆಯಲ್ಲಿ ಒಂದು ಸಂಸ್ಕೃತಿಯನ್ನು ಅಥವಾ ಸಂಸ್ಕೃತಿಯ ಜನರನ್ನು ಅರ್ಥಮಾಡಿಕೊಂಡರೆ ಅರ್ಥ ಮಾಡಿಕೊಳ್ಳುವುದಕ್ಕಿಂತ ಆಪಾರ್ಥ ಮಾಡಿಕೊಳ್ಳುವುದೆ ಹೆಚ್ಚು ಎಂದರು. ಅನುವಾದಕ ಹಾಗೂ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿರುವ ರಾಜಾರಾಮ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ  ಈ ಕೃತಿಯು ಕನ್ನಡಕ್ಕೆ ಅನುವಾದ ಮಾಡಬೇಕೆಂಬ ಕೆ.ವಿ. ಸುಬ್ಬಣ್ಣರ  ಇಛ್ಛೆಯನ್ನು ನೆನಪಿಸಿಕೊಂಡರು.  ಚರಿತ್ರಕಾರರಾಗಿ ಅನುವಾದಕರು ಒಂದು ಕಾಲಘಟ್ಟದಲ್ಲಿ ಎದುರಿಸಿದ್ದ ಪ್ರಶ್ನೆಗಳು ಮತ್ತು ಸಂಧಿಗ್ದತೆಗಳಿಗೆ ಉತ್ತರ ದೊರೆಯದೇ ಗೊಂದಲದಲ್ಲಿದ್ದಾಗ ಬಾಲಗಂಗಾಧರರೊಂದಿಗಿನ  ಸಂವಾದ ಮತ್ತು ಈ ಕೃತಿಯ ಓದು ಆ ಸಂಧಿಗ್ದಗಳಿಂದ ಹೊರಬರಲು ಹೊಸ ದಾರಿ ತೋರಿಸಿತು ಎಂದರು. ಸಮಾಜ ಮತ್ತು ಸಾಂಸ್ಕೃತಿಕ ಚಿತ್ರಣಗಳ ತುಲನಾತ್ಮಕ ಅಧ್ಯಯನಗಳಲ್ಲಿ  ಹೊಸ ಪ್ರಶ್ನೆಗಳನ್ನು ಮತ್ತು ವಾದಗಳನ್ನು ಮುಂದಿಡಲು ಈ ಕೃತಿಯ ಕನ್ನಡಾನುವಾದ ಕನ್ನಡ ಸಾರಸ್ವತ ಲೋಕಕ್ಕೆ  ನೆರವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.  ಬೆಂಗಳೂರು  ವಿ.ವಿಯ ನಿವೃತ್ತ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾದ ಸಿವರಾಮ ಕೃಷ್ಣನ್ ಪುಸ್ತಕವನ್ನು ಪರಿಚಯಿಸುತ್ತಾ ಈ ಕೃತಿ ಸಮಾಜವಿಜ್ಞಾನಗಳಲ್ಲಿ ಇದುವರೆವಿಗೂ ನಡೆದಿರುವ ಚರ್ಚೆಗಳಿಗೆ ಹೇಗೆ ಒಂದು ಹೊಸ ಸವಾಲನ್ನು ಇಡುತ್ತದೆ ಮತ್ತು ಇಂದಿನ ಸಮಾಜ ವಿಜ್ಞಾನಗಳು  ಈ ಸವಾಲನ್ನು ಎದುರಿಸದೆ ಇಂದಿನ ಸ್ಥಿತಿಯಲ್ಲಿಯೇ ಮುಂದುವರಿಯಲು ಹೇಗೆ ಅಸಾಧ್ಯವೆಂಬುದನ್ನು ವಿವರಿಸಿದರು. ಮುಖ್ಯವಾಗಿ, ಈ ಕೃತಿ ಹೇಗೆ ಅತ್ಯಂತ ತಾರ್ಕಿಕವಾಗಿ, ಸಮಾಜ ವಿಜ್ಞಾನಗಳಲ್ಲಿ ಬರುವ ಸಾಂಸ್ಕೃತಿಕ ಚಿತ್ರಣಗಳೆಲ್ಲವೂ ಬಹುತೇಕ ವೈಜ್ಞಾನಿಕ ಚಿತ್ರಣಗಳ ಹೆಸರಿನ ಯೂರೋಪಿಯನ್ ಅದರಲ್ಲೂ ಪ್ರೊಟೆಸ್ಟಂಟ್ ಕ್ರಿಶ್ಚಿಯಾನಿಟಿಯ ಸ್ವಗತದ ಚಿತ್ರಣವೆಂದು ಸಾಧಿಸುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಬಿಡಿಸಿಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮಾಜಿಕ ಮತ್ತು ಮಾನವಿಕ  ಶಾಸ್ತ್ರಗಳ ಅಕಾಡೆಮಿ ನಿರ್ದೇಶಕ ಜೆ ಎಸ್. ಸದಾನಂದ ವಹಿಸಿದ್ದರು. ಅವರು ಕೊನೆಯಲ್ಲಿ ಮಾತನಾಡುತ್ತಾ ಇಂದಿನ ಸಮಾಜ ವಿಜ್ಞಾನದ ಚರ್ಚೆಯಲ್ಲಿ ಸಿದ್ಧಾಂತಗಳ ಕುರಿತ ವಾದ ಚರ್ಚೆಗಿಂತ ಸಿದ್ಧಾಂತ ತವನ್ನು ಮುಂದಿಡುತ್ತಿರುವ ವ್ಯಕ್ತಿ ಮತ್ತು ಅವರ ಹಿನ್ನೆಲೆ, ಉದ್ದೇಶಗಳ ಕುರಿತ ವಿಮರ್ಶೆ ಟೀಕೆಗಳೇ ಹೆಚ್ಚಾಗುತ್ತಿದೆ ಹಾಗೂ ಈ ರೀತಿಯ ಬೆಳವಣಿಗೆಗಳು ಸಮಾಜ ವಿಜ್ಞಾನಗಳನ್ನು ಕೊಂದುಕೊಳ್ಳುವ ಸುಲಭ ಮಾರ್ಗವಾಗುವುದೇ ವಿನಃ ಹೊಸ ವಾದ ಅಥವಾ ಚರ್ಚೆಗಳನ್ನು ಹುಟ್ಟುಹಾಕಲಾರದು ಎನ್ನುವ  ಆತಂಕವನ್ನು ವ್ಯಕ್ತಪಡಿಸಿದರು. ಇಂದಿನ ಸಮಾಜವಿಜ್ಞಾನವನ್ನು ಬೋದಿಸುತ್ತಿರುವ ನಮಗೆ ನಮ್ಮ  ಬೋದನೆ ಸಮಾಜದ ವಾಸ್ತವವನ್ನು ಹಿಡಿದಿಡುತ್ತಿಲ್ಲವೆಂಬುದು ಅರಿವಿಗೆ ಬರುತ್ತಿರುವುದರಿಂದ ಸಮಾಜ ವಿಜ್ಞಾನದಲ್ಲಿ ಆಸಕ್ತಿ ಹೆಚ್ಚಿಸಲು ಮತ್ತು ಸಾಮಾಜಿಕ ಸಮಸ್ಯೆಗಳ ಸೂಕ್ತ ಪರಿಹಾರಗಳಿಗೆ ಸಮಾಜದ ವಾಸ್ತವವನ್ನು ಹಿಡಿದಿಡುವ ಸಿದ್ದಾಂತಗಳ ರೂಪಣೆಗೆ ಮುಂದೊಡಗುವುದು ಅನಿವಾರ್ಯವಾಗಿದೆ ಮತ್ತು ಈ ಕೃತಿ ಈ ನಿಟ್ಟಿನಲ್ಲಿ ಹೊಸ ಹೆಜ್ಚೆಯಾಗಿದೆ ಎಂದು ಆಶಿಸಿದರು.

Advertisements
 1. ಪ್ರಜ್ಞಾ
  ಸೆಪ್ಟೆಂಬರ್ 1, 2010 ರಲ್ಲಿ 5:53 ಅಪರಾಹ್ನ

  ತುಂಬಾ ಖುಷಿಯಾಯ್ತು. CSLC ಮತ್ತು ಹೀದನ್ ಕನಸುಗಳಿಗೆ ರೆಂಬೆ-ಕೊಂಬೆಗಳು ಬಂದು, ಟಿಸಿಲೊಡೆದು, ಹೆಮ್ಮರವಾಗಲಿ!
  ನಿಮ್ಮ,
  ಪ್ರಜ್ಞಾ

  Like

 2. palv
  ಸೆಪ್ಟೆಂಬರ್ 2, 2010 ರಲ್ಲಿ 12:28 ಅಪರಾಹ್ನ

  BTW, it is “dynamic”, but not dynamics (about the title). The double dynamic of religion, for instance.

  Like

 3. ಸೆಪ್ಟೆಂಬರ್ 2, 2010 ರಲ್ಲಿ 1:59 ಅಪರಾಹ್ನ

  Dear Palv,
  Point noted and corrected. Thank you
  Regards
  CSLC

  Ravi Belagere’s report https://docs.google.com/document/edit?id=1uG1Sg2IMTBliBnnghGXVfFWPM20f4exH9bkn49UccYY&pli=1#

  Like

 4. ಸೆಪ್ಟೆಂಬರ್ 2, 2010 ರಲ್ಲಿ 5:51 ಅಪರಾಹ್ನ

  i heard that the book release was a success. Nice. i will buy and read it as soon as possible. belegere wrote agood piece in his hai bangalore. -girisha

  Like

 5. ಸೆಪ್ಟೆಂಬರ್ 3, 2010 ರಲ್ಲಿ 12:01 ಅಪರಾಹ್ನ

  Dear friends,
  I read G.S.R Krishnan’s introduction of Dr. Balu’s research activities about the role of religion as perceived by western critics in a literary magazine “Kalachuvadu”. I read his articles many times and I am not able to comprehend fully. Since I have not read his writings in english ( I have downloaded the book, but yet to read it), I am not qualified to comment on his views. But I understnad that his views on religion and its role quite refreshing and thought provoking. I would be happy, if G.S.R krishnan and his group take efforts to translate the book in tamil so that it will reach tamil people too. I wish to add that I am not a believer, but I think it does not stop me from reading books on religion which view them in new perspective .
  K.S.Sundaram
  K.S.Sundaram

  Like

 6. ಸೆಪ್ಟೆಂಬರ್ 3, 2010 ರಲ್ಲಿ 3:49 ಅಪರಾಹ್ನ

  Dear K. S. Sundaram,
  Thank you for your comment. Its nice to hear that you are following our research. As per your comment on understanding the G.S.R’s article please feel free to write in our blog or on our email address cslcku@gmail.com. You can also follow our discussions in English in yahoo group forum in the following link. (http://groups.yahoo.com/group/TheHeathenInHisBlindness/ ). Discussions will help to understand the ideas of Balu.
  About your query on translation of Heathen to Tamil, Thank you for your suggestion and we too have thought above it and hopefully we will come up with some good news.
  Best
  CSLC Team

  Like

 7. ಸೆಪ್ಟೆಂಬರ್ 6, 2010 ರಲ್ಲಿ 3:51 ಅಪರಾಹ್ನ

  ಒಂದು ಸುವ್ಯವಸ್ಥಿತ ಕಾರ್ಯಕ್ರಮ ಮತ್ತು ಸೌಹಾರ್ದಯುತ ಸಮಾಗಮ
  ಆಮಂತ್ರಿತರೆಲ್ಲರನ್ನೂ ಆದರಿಸಿದ ರೀತಿಯನ್ನು ಕಂಡು ಮುದಗೊಂಡೆ ನಾನು.
  ಚಿತ್ರಗಳು ಸುಂದರವಾಗಿ ಮೂಡಿಬಂದಿವೆ.
  ಎಲ್ಲವಕ್ಕೂ ಧನ್ಯವಾದಗಳು.

  ಪುಸ್ತಕವನ್ನು ಓದಲು ಇನ್ನೂ ಸಮಯಾವಕಾಶ ಆಗಿಲ್ಲ.

  – ಆಸು ಹೆಗ್ಡೆ

  Like

 8. ಸೆಪ್ಟೆಂಬರ್ 25, 2010 ರಲ್ಲಿ 2:02 ಅಪರಾಹ್ನ

  ನಮ್ಮ ಪುಸ್ತಕ ಕನ್ನಡದ ಟಾಪ್ ಟೆನ್ ಪುಸ್ತಕಗಳಲ್ಲಿ

  http://www.hindu.com/fr/2010/09/24/stories/2010092450740200.htm

  Like

 1. ಸೆಪ್ಟೆಂಬರ್ 1, 2010 ರಲ್ಲಿ 6:55 ಅಪರಾಹ್ನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: