ಮುಖ ಪುಟ > Cultural Studies, Culture, Hinduism, Religion, Research Centre > ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ

Published in http://www.nilume.wordpress.com ಸಂಸ್ಕೃತಿ ಸಂಕಥನ – ೬

– ರಮಾನಂದ ಐನಕೈ

ಸಂಶೋಧನೆ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಯಾರಾದರೂ ಸಂಶೋಧನೆ ಮಾಡಿದ್ದಾರೆ ಅಥವಾ ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂದರೆ ನಗು ಬರುತ್ತದೆ. ನೌಕರಿ ಪಡೆಯಲು ಅಥವಾ ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿ.ಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಕ್ಕೆ ಮಾಡುತ್ತಾರೆಯೇ ವಿನಾ ಆಸಕ್ತಿಗಾಗಿ ಅಲ್ಲ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಈ ದುರ್ಗತಿ ಬಂದಿದೆ. ಹಣ ಕೊಟ್ಟರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಪ್ರಬಂಧ ಬರೆದು ಪದವಿ ಕೊಡುತ್ತಾರೆ. ಪಿ.ಎಚ್.ಡಿ. ಎಂಬುದು ವ್ಯಾಪಾರವಾಗಿದೆ. ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವಾದರೂ ಎಂಥದ್ದು. ಯಾರಿಗೂ ಪ್ರಯೋಜನವಾಗದ ವಿಷಯ. ಸಂಶೋಧನಾ ಪ್ರಬಂಧವನ್ನು ನೆಟ್ಟಗೆ ಮೂರು ಜನರು ಓದಲಾರರು. ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯಾ?

 

ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಶಿರಸಿಯ ಗಣಪತಿ ದೇವಸ್ಥಾನದ ಹತ್ತಿರವಿರುವ ಶಂಕರಹೊಂಡದ ಸ್ವಚ್ಛತಾ ಕಾರ್ಯಕ್ರಮ ನಡೆಯತ್ತಿತ್ತು. ಆಗ ಒಂದು ಪುಟ್ಟ ವಿಗ್ರಹ ಸಿಕ್ಕಿತು. ಕ್ಷಣಾರ್ಧದಲ್ಲಿ ಇಡೀ ಶಿರಸಿ ನಗರ ವ್ಯಾಪಿಸಿತು ಈ ಸುದ್ದಿ. ಅಷ್ಟರಲ್ಲಿ ಇತಿಹಾಸ ಸಂಶೋಧಕನೊಬ್ಬ ಅಲ್ಲಿಗೆ ಬಂದ ಆತ ಆಗಷ್ಟೇ ಅರೆಕಾಲಿಕ ಇತಿಹಾಸ ಉಪನ್ಯಾಸಕನಾಗಿ ಸೇರಿದವ. ಆಗಲೇ ಹೆಸರಿನ ಹಿಂದೆ ಪ್ರೊಫೆಸರ್ ಎಂದು ಬಳಸುತ್ತಿದ್ದ. ಆತ ಈ ವಿಗ್ರಹವನ್ನು ಕೂಲಂಕಶವಾಗಿ ಪರಿಶೀಲಿಸಿ ಅದರ ಕುರಿತು ಪತ್ರಿಕಾ ಪ್ರಕಟಣೆ ನೀಡಿದ.

ಶಾತವಾಹನರ ಕಾಲದ ವಿಗ್ರಹವೆಂದು ನೂರೆಂಟು ವಿವರಗಳು ಅದರಲ್ಲಿ ಇದ್ದವು. ಪ್ರಕಟವಾಯಿತು. ಆದರೆ ಎರಡೇ ದಿನಗಳಲ್ಲಿ ಅವೇ ಪತ್ರಿಕೆಗಳಲ್ಲಿ ಪುನಃ ಸುದ್ದಿ ಬಂತು. ಶಂಕರ ಹೊಂಡದಲ್ಲಿ ಸಿಕ್ಕಿದ್ದು ಶಾತವಾಹನರ ಕಾಲದ ವಿಗ್ರಹವಲ್ಲ ಎಂಬ ತಲೆ ಬರಹವಿತ್ತು. ವಿಷಯ ಏನೆಂದರೆ ಶಂಕರ ಹೊಂಡ ಸ್ವಚ್ಛ ಮಾಡುವ ಒಂದು ವರ್ಷದ ಮೊದಲು ಅಲ್ಲೇ ಪಕ್ಕದಲ್ಲಿ ವಾಸಿಸುವ ಗೃಹಸ್ಥನೊಬ್ಬ ಕುಮಟಾದಿಂದ ವಿಗ್ರಹವೊಂದನ್ನು ಖರೀದಿಸಿ ತಂದಿದ್ದ. ಅಷ್ಟರ ನಂತರ ಅವನ ಮನೆಯಲ್ಲಿ ಅವಘಡಗಳೇ ಜರುಗಿದವು. ಕಂಗಾಲಾದ ಆತ ಜ್ಯೋತಿಷಿಗಳೊಬ್ಬರಲ್ಲಿ ಮೊರೆ ಹೋದ. ವಿಗ್ರಹದ ಕಾರಣದಿಂದ ಮನೆಯಲ್ಲಿ ತ್ಡೊಂದರೆಯಾಗಿದೆ. ಆದ್ದರಿಂದ ಆ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿಬಿಡು ಎಂದು ಜ್ಯೋತಿಷಿಗಳು ಸಲಹೆ ನೀಡಿದರು. ಗ್ರಹಸ್ಥ ಆ ಮೂರ್ತಿಯನ್ನು ಶಂಕರ ಹೊಂಡದೊಳಗೆ ಮುಳುಗಿಸಿದ. ಒಂದು ವರ್ಷದ ಹಿಂದಿನ ವಿಗ್ರಹ ಇತಿಹಾಸ ಸಂಶೋಧಕನ ಪ್ರತಿಭೆಯಲ್ಲಿ ಒಂದು ಸಾವಿರ ವರ್ಷ ಹಿಂದಿನ ವ್ಯಾಖ್ಯಾನ ಪಡೆಯಿತು! ಸಂಶೋಧನೆ ಯಾಕೆ ಮಾಡಬೇಕು? ಹೇಗೆ ಮಾಡಬೇಕು? ಅದರಿಂದ ಯಾರಿಗೆ ಪ್ರಯೋಜನ? – ಇತ್ಯಾದಿ ಹಲವಾರು ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ.

ಸಂಶೋಧನೆಗಳಿಗೂ ಸಮಾಜಕ್ಕೂ ಏನಾದರೂ ಸಂಬಂಧ ಇದೆಯೇ? ಅನೇಕ ಸಂದರ್ಭಗಳಲ್ಲಿ ಸಂಶೋಧಕರಿಗೂ ಹಾಗೂ ಅವರ ಸಂಶೋಧನೆಗೂ ಕೂಡ ಸಂಬಂಧ ಇರಲಾರದು. ಹೀಗಾದಾಗ ಸಮಾಜದಲ್ಲಿ ಒಂದು ಸುಸಂಬದ್ಧವಾದ ಚಿಂತನಾಕ್ರಮ ಬೆಳೆಯಲು ಸಾಧ್ಯವಿಲ್ಲ. ಯಾರೋ ಹೇಳಿದ ವಿಚಾರಗಳನ್ನು ನಕಲು ಮಾಡಿ ನಕಲು ಮಾಡಿ ಕೊನೆಗೆ ಆ ವಿಚಾರ ಯಾರಿಗೂ ಅರ್ಥವಾಗದ ಹ0ತ ತಲುಪಿಬಿಡುತ್ತದೆ.

ಹಾಗಾಗಿ ಈ ದೇಶದಲ್ಲಿ ಸಂಶೋಧನಾ ಕಾರ್ಯಕ್ರಮಕ್ಕೆ ಪುನರುಜ್ಜೀವನ ನೀಡಬೇಕಾಗಿದೆ. ಇಂಥ ಕೆಲಸ ಮಾಡುತ್ತಿರುವ ಸಂಶೋಧನಾ ಕೇಂದ್ರ ಅಂದರೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾ ಕೇಂದ್ರ ಅಂದರೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಲ್ಲಿರುವ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಈ ಕೇಂದ್ರ ಕುವೆಂಪು ವಿಶ್ವವಿದ್ಯಾಲಯ ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾಲಯದ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ವಿಶ್ವವಿದ್ಯಾಲಯಗಳ ಸಂಶೋಧನಾ ಕೇಂದ್ರ ಹೇಗಿರಬೇಕೆಂಬುದಕ್ಕೆ ಮಾದರಿ ಇದು. ಜಗತ್ತಿನಲ್ಲೇ ಅದ್ಭುತ ಸಂಶೋಧನಾ ಮಾರ್ಗದರ್ಶಕರೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರೊ. ಬಾಲಗಂಗಾಧರರ ಸಂಕಲ್ಪದ ಫಲ ಈ ಕೇಂದ್ರ. ಒಂದು ರೀತಿಯ ಗುರುಕುಲ ಮಾದರಿಯ ಮಾರ್ಗದರ್ಶನ ಇಲ್ಲಿದೆ. ಸಂಶೋಧನೆ ಮಾಡಲೇಬೇಕೆಂಬ ಪ್ರಬಲ ಇಚ್ಛೆ ಇದ್ದವರಿಗೆ ಮಾತ್ರ ಇಲ್ಲಿ ಪ್ರವೇಶ. ಪ್ರವೇಶಕ್ಕಾಗಿ ಮುನ್ನ ಕಠಿಣ ಪರೀಕ್ಷೆ!

ಇಲ್ಲಿ ಆಯ್ದುಕೊಳ್ಳಬಹುದಾದ ವಿಷಯ ಸಮಾಜವಿಜ್ಞಾನಕ್ಕೆ ಸಂಬಂಧಪಟ್ಟಿದ್ದಾಗಿರಬೇಕು. ಸದ್ಯದ ಭಾರತೀಯ ಸಮಾಜವಿಜ್ಞಾನ ವಸಾಹತು ನಿರೂಪಣೆಯಿಂದ ವಿಕೃತವಾಗಿದೆ. ಇದರಿಂದ ಬಿಡುಗಡೆಗೊಳಿಸುವುದೇ ಇಲ್ಲಿನ ಸಂಶೋಧನೆಗಳ ಮುಖ್ಯ ಗುರಿ. ನಮ್ಮ ನಡುವಿನ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂಥ ಶಿಕ್ಷಣ ಮತ್ತು ಸಂಶೋಧನಾಕಾರ ರೂಪಿಸುವಲ್ಲಿ ಅಂತಾರಾಷ್ಟ್ರಿಯ ಮನ್ನಣೆ ಪಡೆಯುವತ್ತ ಸಾಗಿದೆ ಈ ಅಧ್ಯಯನ ಕೇಂದ್ರ. ಈ ಕೇಂದ್ರದ ಧ್ಯೇಯ ಗಮನ ಸೆಳೆಯುವಂತಿದೆ.

* ಜಾತಿ/ಅಸಮಾನತೆ, ಬಹುತ್ವ/ಸಂಘರ್ಷಗಳ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದು.

* ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲ್ಯಗಳನ್ನು ಕಲಿಸುವುದು.

* ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂರ್ಘಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸ್ಥಾನಿಕ ಸಮುದಾಯಗಳು ಸಾಂಪ್ರದಾಯಿಕವಾಗಿ ಪೋಷಿಸಿಕೊಂಡು ಬಂದಿರುವ ಜ್ಞಾನದ ಸಹಾಯದಿಂದ ರೂಪಿಸುವುದು.

* ಅಭಿವೃದ್ಧಿಪರ ನೀತಿಗಳಲ್ಲಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಳೀಯ ಸಾಂಸ್ಕೃತಿಕ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳುವುದು.

* ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರಿಯ ಮಟ್ಟದ ಸಮಾಜಶಾಸ್ತ್ರೀಯ ಸಂಶೋಧನೆಯ ಕೌಶಲ್ಯಗಳನ್ನು ಕಲಿಸುವುದು.

* ಸಾಮಾಜಿಕ ಹಾಗೂ ಸಾಸಂಕೃತಿಕ ಸಂಘರ್ಷಗಳನ್ನು ಬಗೆಹರಿಸುವ ಮಾರ್ಗೋಪಾಯಗಳನ್ನು ಸ್ಥಾನಿಕ ಸಮುದಾಯಗಳು ಸಾಂಪ್ರದಾಯಿಕವಾಗಿ ಪೋಷಿಸಿಕೊಂಡು ಬಂದಿರುವ ಜ್ಞಾನದ ಸಹಾಯದಿಂದ ರೂಪಿಸುವುದು.

*ಅಭಿವೃದ್ಧಿಪರ ನೀತಿಗಳಲ್ಲಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಸಮಸ್ಯೆಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತವೆ ಎಂಬ ವಿಷಯದ ಕುರಿತು ಬೆಳಕು ಚೆಲ್ಲುವುದು.

ಸ್ಥಾನಿಕ ಸಮುದಾಯಗಳು, ಸ್ಥಾನಿಕ ಆಡಳಿತ ಟಕಗಳು, ಕಾನೂನನ್ನು ರೂಪಿಸುವವರು ಹಾಗೂ ಸರಕಾರೇತರ ಸಂಸ್ಥೆಗಳ ನಡುವೆ ಕೊಡುಕೊಳ್ಳುವಿಕೆಯ ಸಂಬಂಧವನ್ನೇರ್ಪಡಿಸುವುದು. ಹೀಗೆ ಇವರ ಸಂಶೋಧನೆ ಅಂದರೆ ಪುಸ್ತಕ ಬರೆಯುವುದರಲ್ಲಿ ಅದೊಂದು ಸಮಾಜಮುಖಿ ಕಾರ್ಯಕ್ರಮ.

ಇವರ ಸಂಶೋಧನೆ ಅಂದರೆ ಕೇವಲ ವಿಶ್ವವಿದ್ಯಾಲಯದ ಕೊಠಡಿಗಳಲ್ಲಿ ಮಾಡುವ ಅಧ್ಯಯನವಲ್ಲ. ಜನರ ಜೊತೆ ಸಮಾಜದ ಜೊತೆ ನಡೆಸುವ ಸಂವಹನ. ಹಾಗಾಗಿ ಇವರಿಗೆ ಜನರ ಜೊತೆ ಸಂವಾದ ಅನಿವಾರ್ಯ. ಜನರ ಅಹವಾಲುಗಳನ್ನು ಸ್ವೀಕರಿಸುತ್ತ ಅವಕ್ಕೆ ಉತ್ತರ ನೀಡುತ್ತ ಜನರಿಂದಲೂ ಕಲಿಯುತ್ತ ವಿಚಾರ ರೂಪಿಸಿಕೊಳ್ಳುತ್ತ ಬೆಳೆಯುವುದೇ ಇವರ ಸಂಶೋಧನಾ ಕ್ರಮ. ಒಂದು ರೀತಿಯಲ್ಲಿ ವಿಶ್ವವಿದ್ಯಾಲಯ ಜನರ ಜೊತೆ ನಡೆಸುವ ಸಂವಾದ ಇದು. ಇಲ್ಲಿ ಪರಸ್ಪರ ವಿಚಾರಗಳ ವಿನಿಮಯ ಹಾಗೂ ಅನುಭವಗಳ ಬಳಕೆಯಿಂದ ತಿಳುವಳಿಕೆ ಹೆಚ್ಚಲು ಸಾಧ್ಯ. ಈ ತಿಳುವಳಿಕೆ ಅವರವರ ನೆಮ್ಮದಿಗೆ ನಾಂದಿಯಾಗಬೇಕೆಂಬುದೇ ಇವರ ಬಯಕೆ. ನಿಜಕ್ಕೂ ಈ ಸಂಶೋಧನಾ ಕೇಂದ್ರ ದೇಶದಲ್ಲೇ ಅಪರೂಪದ್ದು.

ಇದನ್ನೆಲ್ಲ ಅರಿತಾಗ ನಾವೆಷ್ಟು ಬೌದ್ಧಿಕ ಬಡವರಾಗಿದ್ದೇವೆಂಬುದು ಗೊತ್ತಾಗುತ್ತದೆ. ನಮಗೆ ಸರಿಯಾದ ಓದಿನ ಕ್ರಮ ಗೊತ್ತಿಲ್ಲ. ತರ್ಕ ಉಪಯೋಗಿಸಿ ವಾದ ಬೆಳೆಸುವ ರೀತಿ ಗೊತ್ತಿಲ್ಲ. ನಮಗೊಂದು ನಿರ್ಧಿಷ್ಟ ಚಿಂತನಾಕ್ರಮ ಇಲ್ಲ. ಗೃಹಿಕೆಯ ಸೂಕ್ಷ್ಮತೆ ಇಲ್ಲ. ಹೀಗಿದ್ದಾಗ ನಾವು ಮಾಡುವ ಸಂಶೋಧನೆಗಿಗೆ ಕವಡೆ ಕಿಮ್ಮತ್ತು ಬರಲು ಸಾಧ್ಯವೇ? ಈ ಕಾರಣಕ್ಕಾಗೇ ಇಂದು ನಮ್ಮ ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧನೆಗಲು ಗುಜರಿ ವ್ಯಾಪಾರವಾಗಿದೆ. ಇದು ಬದಲಾಗಬೇಕೆಂಬುದು ಬಾಲಗಂಗಾಧರ ಕನಸು. ವರ್ಷಕ್ಕೆರಡು ಸಾರಿ ಇವರೇ ಸಂಸ್ಕೃತಿ ಅಧ್ಯಯನ ಕೇಂದ್ರಕ್ಕೆ ಬಂದು ಮಾರ್ಗದರ್ಶನ ನೀಡುತ್ತಾರೆ. ಬಾಲಗಂಗಾಧರರ ಹತ್ತಿರ ಸೈ ಅನಿಸಿಕೊಗಿಂಡು ಸಂಶೋಧನೆಗೆ ನೊಂದಣಿ ಮಾಡಿಕೊಳ್ಳುವುದೊಗಿಂದು ಹರಸಾಹಸ. ವರ್ಷಾನುಗಟ್ಟಲೇ ವಿದ್ಯಾರ್ಥಿಿಗಳ ಆಸಕ್ತಿಯನ್ನೇ ಒರೆಗೆ ಹಚ್ಚುತ್ತಾರೆ ಅವರು. ಸಂಶೋಧನಾ ವಿದ್ಯಾರ್ಥಿಗೆ ಬೇಕಾದ ಅರ್ಹತೆಗಳನ್ನೆಲ್ಲ ಪಡೆದುಕೊಂಡ ಮೇಲೆ ಅನುಮತಿ ನೀಡುತ್ತಾರೆ. ಆದ್ದರಿಂದ ಕೇವಲ ಉದ್ಯೋಗಾಕಾಂಕ್ಷೆಯಿಂದ ಸಂಶೋಧನೆಗೆ ಬರುವವರಿಗೆ ಇದು ಕಠಿಣ ಸ್ಥಳ.

ಕರ್ನಾಟಕದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಗುಣಾತ್ಮಕ ಸಂಶೋಧನೆ ನಡೆಸಲು ಹಲವಾರು ತೊಂದರೆ ಇದೆ. ಮೊದಲನೆಯದಾಗಿ ಭಾಷಾ ಸಮಸ್ಯೆ. ಕನ್ನಡದಲ್ಲಿ ಆಕರ ಗ್ರಂಥಗಳು ಸಿಗುವುದು ಕಷ್ಟ. ಹಾಗಾಗಿ ಭಾಷಾಂತರ ಕಾರ್ಯಕ್ರಮವು ಇವರ ಗುರಿಯಾಗಿದೆ. ಸಮಾಜ ವಿಜ್ಞಾನದ ಪಠ್ಯಗಳ ಕನ್ನಡಾನುವಾದ ಮಾಡುತ್ತಿದ್ದಾರೆ. ಜಾತಿ, ಅಸಮಾನತೆ, ಬಹುತ್ವ ಹಾಗೂ ಸಂಘರ್ಷಗಳ ಸಂಶೋಧನೆಗೆ ಸಂಬಂಧಿಸಿ ವಿಶೇಷವಾದ ಗ್ರಂಥಾಲಯವೊಂದನ್ನು ಬೆಳೆಸುತ್ತಿದ್ದಾರೆ. ಅದೂ ಅಲ್ಲದೇ ಈ ಕೇಂದ್ರ ಭಾರತದ ಸಮಾಜ ವಿಜ್ಞಾನಗಳನ್ನು ಕಾಡುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ಗುರುತಿಸಿದೆ.

1) ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯ ಶಿಸ್ತು ಬಹುತೇಕ ಕಾಣೆಯಾಗಿದೆ.

2) ಸ್ಥಾನಿಕ ಸಮುದಾಯಗಳು ಹಾಗೂ ಸಮಾಜ ವಿಜ್ಞಾನದ ಸಿದ್ಧಾಂತಗಳ ನಡುವಿನ ಸಂಬಂಧ ಕಡಿದು ಹೋಗಿದೆ.

3) ಸಂಶೋಧನೆಗೆ ಅವಶ್ಯವಿರುವ ಸೂಕ್ತ ತರಬೇತಿಯ ಕೊರತೆಯಿದೆ.

4) ಸಂಶೋಧನೆಗೆ ಅಗತ್ಯವಿರುವ ಮಾಹಿತಿಗಳು ಸರಿಯಾಗಿ ಲಭ್ಯವಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಸಂಶೋಧಕರ ತಂಡವನ್ನು ಹುಟ್ಟುಹಾಕಿ ಅವರಿಗೆ ಅತ್ಯುತ್ತಮವಾದ ಸಂಶೋದನಾ ವಿಧಾನಗಳಲ್ಲಿ ತರಬೇತಿ ನೀಡಿ ಅವರನ್ನು ಸ್ಥಳೀಯ ಸಮಾಜಗಳ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸುವಂತೆ ಪ್ರೇರೇಪಿಸುವುದು ಈ ಕೇಂದ್ರದ ಬಹು ಮಹತ್ವದ ಉದ್ದೇಶ. ಶಿವಮೊಗ್ಗದ “ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ” ಎಲ್ಲ ವಿಶ್ವವಿದ್ಯಾಲಯಗಳಿಗೂ ಮಾದರಿಯಾಗಲಿ

Advertisements
  1. No comments yet.
  1. No trackbacks yet.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: